Maruti Suzuki Alto K10 | ಕೇವಲ 3.5 ಲಕ್ಷಕ್ಕೆ ಕಾರ್!
ಮಾರುತಿ ಸುಜುಕಿ ಆಲ್ಟೋ ಕೆ 10 ಹೊಸ ಕಾರು
ಆಗಸ್ಟ್ 18ಕ್ಕೆ ನೂತನ ಕಾರು ಬಿಡುಗಡೆ
ಆಗಸ್ಟ್ 13 ರಿಂದ ಬುಕಿಂಗ್ ಆರಂಭ
11 ಸಾವಿರದೊಂದಿಗೆ ಕಾರು ಬುಕಿಂಗ್
ನವದೆಹಲಿ : ಮಾರುಕಟ್ಟೆ ಭಾರಿ ಪೈಪೋಟಿ ಎದುರಿಸುತ್ತಿರುವ ಮಾರುತಿ ಸುಜುಕಿ ಶೀಘ್ರದಲ್ಲಿಯೇ ಪ್ರತಿಸ್ಪರ್ಧಿಗಳಿಗೆ ಟಕ್ಕರ್ ನೀಡಲಿದೆ.
ಸದ್ಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ಮಾರುತಿ ಸುಜುಕಿ, ಮಹೀಂದ್ರ ಹಾಗೂ ಟಾಟಾ ಮೋಟಾರ್ಸ್ ಕಂಪನಿಗಳ ಪೈಪೋಟಿ ಎದುರಿಸುತ್ತಿದೆ.
ಹೀಗಾಗಿ ಮಾರುತಿ ತನ್ನ ಕಾರುಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.
ಇದೇ ಆಗಸ್ಟ್ 18 ಕ್ಕೆ ಮಾರುತಿ ಸುಜುಕಿ ಅಲ್ಟೋ ಕೆ10 ಕಾರು ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ.
ಇದರ ಬುಕಿಂಗ್ ಆಗಸ್ಟ್ 13 ರಿಂದ ಆರಂಭವಾಗಿದೆ. 11,000 ರೂಪಾಯಿಗೆ ನೂತನ ಮಾರುತಿ ಅಲ್ಟೋ ಕೆ10 ಕಾರು ಬುಕಿಂಗ್ ಮಾಡಿಕೊಳ್ಳಬಹುದು.
ನೂತನ ಕಾರು 7 ವೇರಿಯೆಂಟ್ಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಅಲ್ಟೋ ಕೆ10 ಕಾರಿನ ಬೆಲೆ 350 ಲಕ್ಷ ರೂಪಾಯಿ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 5.50 ಲಕ್ಷ ರೂಪಾಯಿ.
ನೂತನ ಮಾರುತಿ ಸುಜುಕಿ ಅಲ್ಟೋ ಕೆ 10 ಕಾರಿನಲ್ಲಿ ಹಲವು ಹೊಸತನಗಳಿವೆ. ಮುಂಭಾಗದ ಗ್ರಿಲ್ ಸಂಪೂರ್ಣವಾಗಿ ಬದಲಾಗಿವೆ.
ಕಾರಿನ ಒಳಗಿನ ಕ್ಯಾಬಿನ್ ಬ್ಲಾಕ್ ಥೀಮ್ ನಲ್ಲಿ ನಿರ್ಮಿಸಲಾಗಿದೆ.
ಈ ಹೊಸ ಆಲ್ಟೋದ ಒಟ್ಟಾರೆ ಉದ್ದ, ಅಗಲ ಮತ್ತು ಎತ್ತರ ಕ್ರಮವಾಗಿ 353 ಎಂಎಂ, 1490 ಎಂಎಂ ಮತ್ತು