ಫೇರ್ ಮಾಡದ ಫೇರ್ ಅಂಡ್ ಲವ್ಲಿಗೆ `ಹೊಸ ಹೆಸರು’

1 min read

ಬೆಂಗಳೂರು: ಕಪ್ಪಗಿದ್ದವರು ನಾಲ್ಕೇ ವಾರದಲ್ಲಿ ಬೆಳ್ಳಗಾಗಬಹದು ಎನ್ನುತ್ತಲೇ ಭಾರತ ಸೇರಿದಂತೆ ಏಷ್ಯಾದ ಮಾರುಕಟ್ಟೆಯನ್ನೇ ಕಬಳಿಸಿರುವ ಫೇರ್ ಅಂಡ್ ಲವ್ಲಿ ಕ್ರೀಂ ಫೇರ್( ಸುಂದರವಾಗಿ ಕಾಣುವಂತೆ) ಮಾಡುತ್ತಿಲ್ಲವಂತೆ. ಹೀಗಾಗಿ ಹಿಂದೂಸ್ತಾನ್ ಯೂನಿಲಿವರ್ ಕಂಪನಿ ಫೇರ್ ಅಂಡ್ ಲವ್ಲಿಗೆ ಹೊಸ ಹೆಸರು ಇಟ್ಟು ಮಾರುಕಟ್ಟೆಗೆ ತರಲು ಸಿದ್ಧತೆ ಆರಂಭಿಸಿದೆ.


ಫೇರ್ ಅಂಡ್ ಲವ್ಲಿ ವಿರುದ್ಧ ಅನೇಕ ದೂರುಗಳು ದಾಖಲಾಗಿವೆ. ಸೌಂದರ್ಯವರ್ಧಕವಾದ ಈ ಕ್ರೀಂನಲ್ಲಿ ಸ್ಟಿರಾಯ್ಡ್ ರಾಸಾಯನಿಕ ಮಿಶ್ರಣ ಮಾಡಲಾಗುತ್ತಿದೆ. ಹೀಗಾಗಿ ಸೌಂದರ್ಯ ವೃದ್ಧಿಯಾಗುವುದರ ಬದಲು ಚರ್ಮ ಕಪ್ಪಾಗುತ್ತಿದೆ ಎಂದು ಹಿಂದೂಸ್ತಾನ್ ಯೂನಿಲಿವರ್‍ಗೆ ಕಳೆದ ಒಂದು ವರ್ಷದಿಂದ ಸಾಕಷ್ಟು ದೂರುಗಳು ಬರುತ್ತಿವೆಯಂತೆ. ಜತೆಗೆ ಹಲವು ಕೋರ್ಟ್‍ಗಳಲ್ಲೂ ಕೂಡ ಫೇರ್ ಅಂಡ್ ಲವ್ಲಿ ವಿರುದ್ಧ ಕೇಸ್‍ಗಳು ದಾಖಲಾಗಿವೆ ಎನ್ನಲಾಗಿದೆ.
ಈ ಆರೋಪದಿಂದ ಹೊರಬರಲು ಪ್ಲ್ಯಾನ್ ಮಾಡುತ್ತಿರುವ ಹಿಂದೂಸ್ತಾನ್ ಯೂನಿಲಿವರ್ ಕಂಪನಿ, ಫೇರ್ ಅಂಡ್ ಲವ್ಲಿ ಬ್ರ್ಯಾಂಡ್‍ನ ಹೆಸರನ್ನೇ ಬದಲಾಯಿಸಿ ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಈ ಸಂಬಂಧ ನಿಯಂತ್ರಣಾ ಪ್ರಾಧಿಕಾರಗಳಿಂದ ಒಪ್ಪಿಗೆಗಾಗಿ ಕಾಯುತ್ತಿದೆ.
ದಕ್ಷಿಣ ಏಷ್ಯಾಗಳಲ್ಲಿ ಅಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ಆಫ್ಗಾನಿಸ್ತಾನ, ಮಾಲ್ಡೀವ್ಸ್ ರಾಷ್ಟ್ರಗಳ ಜನರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚಿದೆಯಂತೆ. ಬೇರೆಯವರಿಗಿಂತ ತಾವು ಮತ್ತಷ್ಟು ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೌಣದರ್ಯವರ್ಧಕಗಳ ಮೊರೆ ಹೋಗುತ್ತಾರೆ ಎಂದು ಸರ್ವೆಯೊಂದು ಹೇಳುತ್ತದೆ.
ಫೇರ್ ಅಂಡ್ ಲವ್ಲಿಯಂತೆಯೇ ಲೋರಿಯಾಲ್, ಪ್ರಾಕ್ಟರ್ ಅಂಡ್ ಗ್ಯಾಂಬಲ್‍ನ ಸೌಂದರ್ಯವರ್ಧಕಗಳ ವಿರುದ್ಧವೂ ಅರೋಪಗಳಿವೆ ನ್ನಲಾಗಿದೆ. ಈ ಸೌಂದರ್ಯ ವರ್ಧಕಗಳು ಜನರ-ಜನರ ನಡುವೆ ಬಣ್ಣ ತಾರತಮ್ಯ ಹೆಚ್ಚಿಸುತ್ತಿವೆ ಎಂದು ಎಂಬ ಆರೋಪಗಳಿವೆ.
ಫೇರ್ ಅಂಡ್ ಲವ್ಲಿ ವಿರುದ್ಧ 2014ರಲ್ಲಿ ಮಿಸ್ ಅಮೆರಿಕಾ ಕಿರೀಟ ಗೆದ್ದಿದ್ದ ಭಾರತ ಮೂಲದ ನಿನಾ ದವುಲುರಿ ಸೇರಿದಂತೆ ಹಲವು ದೂರುಗಳು ದಾಖಲಾಗಿವೆ. ಈ ಆರೋಪಗಳಿಂದ ಹೊರಬರಲು ಹೊಸ ಬ್ರ್ಯಾಂಡ್‍ನಡಿ ಫೇರ್ ಅಂಡ್ ಲವ್ಲಿ ಕ್ರೀಂನ್ನು ತರಲು ಕಂಪನಿ ಯೋಜನೆ ರೂಪಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd