ಟೆಸ್ಟ್ ಚಾಂಪಿಯನ್ನರು ಟಿ-ಟ್ವೆಂಟಿ ಚಾಂಪಿಯನ್ ಕೂಡ ಆಗ್ತಾರಾ ?

1 min read
newzealand t-20 wolrdcup saakshatv

newzealand wtc final test champion saakshatvನಿಜಕ್ಕೂ ನ್ಯೂಜಿಲೆಂಡ್ ತಂಡ ಮೈದಾನದಲ್ಲಿ ಇದ್ದರೆ ಅದಕ್ಕೊಂದು ಗೌರವವೇ ಬೇರೆ. ಎದುರಾಳಿಯನ್ನು ಕೆಟ್ಟದಾಗಿ ನೋಡುವುದಿಲ್ಲ. ಆಟಗಾರರನ್ನು ಕೆಣಕುವುದಿಲ್ಲ. ಕ್ರೀಡಾಸ್ಪೂರ್ತಿಗೆ ಮತ್ತೊಂದು ಹೆಸರೇ ನ್ಯೂಜಿಲೆಂಡ್ ತಂಡ ಅನ್ನುವ ಹಾಗೇ ಮೈದಾನದಲ್ಲಿ ಆಟ ಆಡುತ್ತದೆ.

ಸೈಲೆಂಟ್ ಆಗಿ ತನ್ನ ಕೆಲಸವನ್ನು ಮುಗಿಸಿ ಅಭಿಮಾನಿಗಳ ಮನ ಗೆಲ್ಲುತ್ತದೆ. ಸದ್ಯ ವಿಶ್ವ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಸೈಲೆಂಟ್ ಕಿಲ್ಲರ್ ಆಗಿ ಬೆಳೆಯುತ್ತಿದೆ.

ಕಳೆದ 6 ವರ್ಷಗಳಲ್ಲಿ ನ್ಯೂಜಿಲೆಂಡ್ 4 ಬಾರಿ ಐಸಿಸಿ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದೆ. ಏಕದಿನ ವಿಶ್ವಕಪ್ನಲ್ಲಿ ಎರಡು ಬಾರಿ, ಟಿ20 ವಿಶ್ವಕಪ್ನಲ್ಲಿ ಒಮ್ಮೆ ಹಾಗೂ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪನಲ್ಲಿ ಅಂತಿಮ ಹಂತ ಪ್ರವೇಶಿಸಿದೆ. ಟೀಮ್ ಇಂಡಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಂತಹ ಘಟಾನುಘಟಿ ತಂಡಗಳೇ ಮುಗ್ಗರಿಸಿರುವಾಗ ನ್ಯೂಜಿಲೆಂಡ್ ಮಾತ್ರ ಸ್ಥಿರ ಆಟವಾಡುತ್ತಾ ಯಾರಿಗೂ ಗೊತ್ತಾಗದಂತೆ ಜನ ಮನ ಗೆದ್ದಿದೆ. ನ್ಯೂಜಿಲೆಂಡ್ ಅಂದರೆ ಇವತ್ತಿಗೂ ಡೇಂಜರಸ್ ತಂಡ ಅಂತ ಅನಿಸುವುದೇ ಇಲ್ಲ. ಬದಲಾಗಿ ಈ ತಂಡ ಗೆಲ್ಲಬೇಕು ಅನ್ನುವ ಹಾಗೇ ಅಭಿಮಾನಿಗಳ ಮನ ಗೆದ್ದಿದೆ.
ಮೊದಲ ಹೆಜ್ಜೆ:
2015 ವಿಶ್ವಕಪ್ ಫೈನಲ್
ಆಸ್ಟ್ರೇಲಿಯಾ ವಿರುದ್ಧ ಸೋಲು
ಇದು ನ್ಯೂಜಿಲೆಂಡ್ ತಂಡದ ಮೊತ್ತ ಮೊದಲ ಐಸಿಸಿ ಟೂರ್ನಿಯ ಫೈನಲ್ ಪಂದ್ಯ. 2015ರ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿಸ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದರೂ ತನ್ನ ಆಟದ ಮೂಲಕ ಎಲ್ಲರ ಮನ ಗೆದ್ದಿತ್ತು.
ಎರಡನೇ ಹೆಜ್ಜೆ:
newzealand team saakshatv t-20 wolrdcup2019 ವಿಶ್ವಕಪ್ ಫೈನಲ್
2019ರ ಏಕದಿನ ವಿಶ್ವಕಪ್ನಲ್ಲೂ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿತ್ತು. ಸತತ ಎರಡನೇ ಬಾರಿಗೆ ಫೈನಲ್ ಎಂಟ್ರಿ ಪಡೆದ ಕಿವೀಸ್ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು. ನ್ಯೂಜಿಲೆಂಡ್ ರನ್ನರ್ ಅಪ್ ಆದರೂ ಎಲ್ಲರ ಮನ ಗೆದ್ದಿತ್ತು ಅನ್ನುವುದು ಸುಳ್ಳಲ್ಲ.
ಮೂರನೇ ಹೆಜ್ಜೆ:
2021- ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ವಿನ್ನರ್
ಎರಡು ಬಾರಿ ಐಸಿಸಿಸ ಫೈನಲ್ನಲ್ಲಿ ಎಡವಿದ್ದ ನ್ಯೂಜಿಲೆಂಡ್ 3ನೇ ಬಾರಿ ಅದನ್ನು ಒಲಿಸಿಕೊಂಡು ಬಿಟ್ಟಿತು. ಜೂನ್ನಲ್ಲಿ ನಡೆದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನ್ಯೂಜಿಲೆಂಡ್ ಟೀಮ್ ಇಂಡಿಯಾವನ್ನು ಸೋಲಿಸಿತು. ಈ ಮೂಲಕ ಚೊಚ್ಚಲ ಐಸಿಸಿ ಟ್ರೋಫಿ ಹಿಡಿದು ಬೀಗಿತು.
ನಾಲ್ಕನೇ ಹೆಜ್ಜೆ:
2021- ಟಿ20 ವಿಶ್ವಕಪ್ ಫೈನಲಿಸ್ಟ್
ಈಗ ಟಿ20 ವಿಶ್ವಕಪ್ನ ಫೈನಲ್ಗೆ ಎಂಟ್ರಿ ಪಡೆದಿದೆ. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ನ್ಯೂಜಿಲೆಂಡ್ ದಿನದಿಂದ ದಿನಕ್ಕೆ ಬಲಿಷ್ಠ ತಂಡವಾಗಿ ಬೆಳೆಯುತ್ತಿದೆ. ಕ್ಯಾಪ್ಟನ್ ಕೂಲ್ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ಕ್ರಿಕೆಟ್ನ ದಿಕ್ಕನ್ನೇ ಬದಲಿಸಿದ್ದಾರೆ. ಒಂದು ತಂಡವಾಗಿ, ಶಿಸ್ತಿನಿಂದ ಕ್ರಿಕೆಟ್ ಹೇಗೆ ಆಡಬೇಕು ಅನ್ನುವುದನ್ನು ನ್ಯೂಜಿಲೆಂಡ್ ಪ್ರತೀ ಬಾರಿಯೂ ತೋರಿಸಿಕೊಡುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd