ನ್ಯೂಜಿಲೆಂಡ್ ತಂಡಕ್ಕೆ ಆಘಾತ : ಟೂರ್ನಿಯಿಂದ ವಿಲಿಯಮ್ಸನ್ ಔಟ್
ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಭಾರಿ ಆಘಾತ ಎದುರಾಗಿದೆ.
ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮೊಣಕೈ ಗಾಯದಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಕೆಲ ದಿನಗಳ ವಿಶ್ರಾಂತಿ ಬಳಿಕ ಅವರು ಟೆಸ್ಟ್ ಸರಣಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ವಿಲಿಯಮ್ಸನ್ ಟಿ 20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಪ್ರಶಸ್ತಿ ಸುತ್ತಿಗೆ ಕರೆದುಕೊಂಡು ಹೋಗಿದ್ದರು.
ಆದ್ರೆ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿದರು.
ಸದ್ಯ ಜೈಪುರ ಸೇರಿಕೊಂಡಿರುವ ಕಿವೀಸ್ ತಂಡ ನಾಳೆಯಿಂದ ಟಿ 20 ಸರಣಿ ಆಡಲಿದೆ.
ಇದಾದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿ ಟೆಸ್ಟ್ ಸರಣಿ ಆಡಲಿದೆ.
ಹಿನ್ನಲೆಯಲ್ಲಿ ಮೊದಲ ಡಬ್ಲ್ಯುಟಿಸಿ ಪ್ರಶಸ್ತಿ ವಿಜೇತ ನಾಯಕನಾಗಿ ಇತಿಹಾಸ ನಿರ್ಮಿಸಿರುವ ವಿಲಿಯಮ್ಸನ್, ಸರಣಿಯ ಮೇಲೆ ಸಂಪೂರ್ಣ ಗಮನ ಹರಿಸುವ ಭರವಸೆಯಲ್ಲಿದ್ದಾರೆ.
ಭಾರತಕ್ಕೆ ತವರಿನಲ್ಲಿಯೇ ಟಕ್ಕರ್ ನೀಡಲು ಕಿವೀಸ್ ತಂಡ ರಣ ತಂತ್ರ ರೂಪಿಸುತ್ತಿದೆ.
ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಪ್ರಕಾರ, ವಿಲಿಯಮ್ಸನ್ ಗಾಯದ ಕಾರಣ ಟಿ20 ಸರಣಿಯಿಂದ ದೂರವಿರಲು ನಿರ್ಧರಿಸಿದ್ದಾರೆ.
ಕೇನ್ ವಿಲಿಯಮ್ಸನ್ ಬದಲಿಗೆ ವೇಗಿ ಟೀಂ ಸೌಥಿ ಟಿ 20 ಸರಣಿಯಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಇತ್ತ ರೋಹಿತ್ ಶರ್ಮಾ ಇದೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕರಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಅಜಿಂಕ್ಯ ರಹಾನೆ ಮೊದಲ ಟೆಸ್ಟ್ ನಲ್ಲಿ ಭಾರತ ಕ್ರಿಕೆಟ್ ತಂಡದ ಸಾರಥ್ಯ ವಹಿಸಲಿದ್ದಾರೆ.









