ADVERTISEMENT

ಟಿ20 ವಿಶ್ವಕಪ್ | ನ್ಯೂಜಿಲೆಂಡ್ ಗೆ ಸ್ಕಾಟ್ಲೆಂಡ್ ಸವಾಲು

ಟಿ20 ವಿಶ್ವಕಪ್ | ನ್ಯೂಜಿಲೆಂಡ್ ಗೆ ಸ್ಕಾಟ್ಲೆಂಡ್ ಸವಾಲು

ಐಸಿಸಿ ಟಿ20 ವಿಶ್ವಕಪ್ನ ಗ್ರೂಪ್ 12 ಪಂದ್ಯಗಳು ಈಗ ರೋಚಕ ಹಂತಕ್ಕೆ ಬಂದಿವೆ.

Related posts

ಗ್ರೂಪ್ 2ರಲ್ಲಂತೂ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

ಪಾಕಿಸ್ತಾನ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡು ಮುನ್ನಡೆಯುತ್ತಿದ್ದರೆ, ಅಫ್ಘಾನ್ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ಸ್ಥಾನಕ್ಕಾಗಿ ನೇರ ನೇರ ಫೈಟ್ ಮಾಡುತ್ತಿವೆ.

ಟೀಮ್ ಇಂಡಿಯಾ ಕೂಡ ಈ ತಂಡಗಳ ಜೊತೆ ಪೈಪೋಟಿಗೆ ಇಳಿದಿದೆ.

ಹೀಗಾಗಿ ನ್ಯೂಜಿಲೆಂಡ್ ದುಬೈಯಲ್ಲಿ ಸುಲಭ ಎದುರಾಳಿ ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮುನ್ನ ಲೆಕ್ಕಾಚಾರದಲ್ಲಿ ಮುಳುಗಿದೆ.

ನ್ಯೂಜಿಲೆಂಡ್ ಬಲಿಷ್ಠ ಅನ್ನುವುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್ನಲ್ಲಿ ಗಪ್ಟಿಲ್ ಮಿಂಚದೇ ಇದ್ದರೂ ಅವರ ಮೇಲೆ ಅನುಮಾನವಿಲ್ಲ.

ಡೆರಿಲ್ ಮಿಚೆಲ್ ಮತ್ತು ಕೇನ್ ವಿಲಿಯಮ್ಸನ್ ರನ್ಗಳಿಸಿದ್ದಾರೆ. ಡೆವೊನ್ ಕಾನ್ವೆ, ಗ್ಲೆನ್ ಫಿಲಿಪ್ಸ್ ಮತ್ತು ಜಿಮ್ಮಿ ನಿಶಾನ್ ಬ್ಯಾಟ್ ಆಟ ಶುರುಮಾಡಿದರೆ ಸ್ಕಾಟ್ಲೆಂಡ್ಗೆ ಸಂಕಟ ಗ್ಯಾರೆಂಟಿ.

New Zealand vs Scotland

ಬೌಲಿಂಗ್ನಲ್ಲೂ ಕೀವೀಸ್ ಸೂಪರ್. ಟ್ರೆಂಟ್ ಬೋಲ್ಟ್ ಮತ್ತು ಟಿಮ್ ಸೌಥಿ ಸ್ವಿಂಗ್ ಮೂಲಕ ಕಾಡಿದರೆ,  ಆ್ಯಡಮ್ ಮಿಲ್ನೆ ವೇಗದಿಂದ ಭಯ ಹುಟ್ಟಿಸುತ್ತಾರೆ.

ಮಿಚೆಲ್ ಸ್ಯಾಂಟ್ನರ್ ಮತ್ತು ಈಶ್ ಸೋಧಿ ರನ್ ಕೊಡದೆ ವಿಕೆಟ್ ಕೀಳುತ್ತಿರುವುದು ಕಿವೀಸ್ ಬಲ ಹೆಚ್ಚಿಸಿದೆ.

ಸ್ಕಾಟ್ಲೆಂಡ್ ತಂಡದಲ್ಲಿ ಹೇಳುವಂತಹ ಆಟಗಾರರಿಲ್ಲ. ಆದರೆ ಸಾಂಘೀಕ ಆಟದ ಮೂಲಕ ಗಮನ ಸೆಳೆಯಲು ಪ್ಲಾನ್ ಮಾಡಿಕೊಳ್ಳುತ್ತಿದೆ.

ಕೈಲ್ ಕೊಯ್ಟಜರ್ ಮತ್ತು ರಿಚಿ ಬ್ಯಾರಿಂಗ್ಟನ್ ಆಟದ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ. ಒಟ್ಟಿನಲ್ಲಿ ನ್ಯೂಜಿಲೆಂಡ್ ತಂಡವನ್ನು ಸುಲಭವಾಗಿ ಗೆಲ್ಲಲು ಬಿಡಬಾರದು ಅನ್ನುವುದು ಸ್ಕಾಟ್ಲೆಂಡ್ ತಂತ್ರವಾಗಿದೆ.

Join us on: