ನವದೆಹಲಿ : ಆಮ್ಲಜನಕ ಕೊರತೆ 25 ರೋಗಿಗಳ ಸಾವು

1 min read

ನವದೆಹಲಿ : ಆಮ್ಲಜನಕ ಕೊರತೆ 25 ರೋಗಿಗಳ ಸಾವು

ನವದೆಹಲಿ : ಆಮ್ಲಜನಕ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ 25 ರೋಗಿಗಳು ಮೃತಪಟ್ಟಿರುವ  ಘಟನೆ ದೆಹಲಿಯ ಗಂಗಾರಾಮ್ ನಡೆದಿದೆ.

ದೆಹಲಿಯ ಖ್ಯಾತ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 25 ತೀವ್ರ ಅನಾರೋಗ್ಯಪೀಡಿತ ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ. ಇಂದು ಸರ್ಕಾರಕ್ಕೆ ಎಸ್‌ಎಎಸ್ ನ್ನು ಕಳುಹಿಸಿರುವ ಆಸ್ಪತ್ರೆ ಇನ್ನು ಕೇವಲ ಎರಡು ಗಂಟೆಗಳವರೆಗೆ ರೋಗಿಗಳಿಗೆ ಆಕ್ಸಿಜನ್ ನೀಡಲು ವ್ಯವಸ್ಥೆಯಿದ್ದು 60 ಮಂದಿ ರೋಗಿಗಳ ಜೀವ ತೀವ್ರ ಅಪಾಯದಲ್ಲಿದೆ ಎಂದು ಹೇಳಿದೆ.

ರಾಷ್ಟ್ರರಾಜಧಾನಿಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಇದರಿಂದಾಗಿ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಆಕ್ಸಿಜನ್ ನೀಡಲು ವಿಳಂಬವಾಗುತ್ತಿರುವುದಾಗಿ ವರದಿ ತಿಳಿಸಿದೆ. ಆಸ್ಪತ್ರೆಯಲ್ಲಿ ಕೇವಲ ಎರಡು ಗಂಟೆಗಳಿಗೆ ಸಾಕಾಗುವಷ್ಟು ಆಕ್ಸಿಜನ್ ದಾಸ್ತಾನು ಇದ್ದು, ಸುಮಾರು 60 ಮಂದಿ ರೋಗಿಗಳು ಅಪಾಯದ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಪ್ರಮುಖ ಆಸ್ಪತ್ರೆಯಾದ ಗಂಗಾ ರಾಮ್ ಆಸ್ಪತ್ರೆ ಮತ್ತು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ತಮಗೆ ಆಕ್ಸಿಜನ್ ಟ್ಯಾಂಕರ್ ಕಳುಹಿಸಿಕೊಡಿ ಎಂದು ಸರ್ಕಾರಕ್ಕೆ ಎಸ್‌ಒಎಸ್ (Save Our Souls) ಕಳುಹಿಸಿವೆ. ಆಮ್ಲಜನಕವನ್ನು ತುರ್ತಾಗಿ ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ವ್ಯವಸ್ಥೆ ಮಾಡಿ. ಇನ್ನೂ 60 ರೋಗಿಗಳ ಜೀವ ಗಂಡಾಂತರದಲ್ಲಿದೆ ಎಂದು ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

ಅಣ್ಣನ  ಕೊಲೆ ಆರೋಪದಲ್ಲಿ ಜೈಲು ಸೇರಿದ ಮಿಸ್ ಕರ್ನಾಟಕ, ಛೋಟಾ ಬಾಂಬೆ ನಟಿ

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd