Newdehli : ಬಾಲಕಿಯನ್ನ ಅಪಹರಿಸಿ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿದ ನರ ರೂಪಿ ರಾಕ್ಷಸರು..!!
ನವದೆಹಲಿ : ಮೂವರು ಕೀಚಕರು 16 ವರ್ಷದ ಬಾಲಕಿಯನ್ನ ಅಪಹರಿಸಿ ಆಕೆಯ ಮೇಲೆ ಕಾರಿನಲ್ಲಿಯೇ ಅತ್ಯಾಚಾರವೆಸಗಿರುವ ಹೇಯ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ..
ಬಾಲಕಿಯನ್ನ ಮನೆಯ ಸಮೀಪದಲ್ಲಿ ಅಪಹರಿಸಿ ಚಲಿಸುತ್ತಿದ್ದ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ದೆಹಲಿಯ ವಸಂತ ವಿಹಾರ್ನಿಂದ 16 ವರ್ಷದ ಹುಡುಗಿಯನ್ನು ಆರೋಪಿಗಳು ಅಪಹರಿಸಿದ್ದಾರೆ. ಸುಮಾರು 44 ಕಿಲೋಮೀಟರ್ಗಳವರೆಗೆ ಕಾರನ್ನು ಚಲಾಯಿಸುತ್ತಲ್ಲೆ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾರೆ.
ಘಟನೆ ನಂತರ ಸಂತ್ರಸ್ತೆ ಕುಟುಂಬಸ್ಥರಿಗೆ ತಿಳಿಸಿದ್ದು, ಆಕೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ..
ಯುವತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಕಾಮುಕರನ್ನ ಬಂಧಿಸಿದ್ದಾರೆ. ಬಂಧಿತರನ್ನು ಮನೋಜ್ ಕುಮಾರ್ (25), ರೂಪೇಶ್ ಕುಮಾರ್ (35), ಮೊಹಮ್ಮದ್ ಆರಿಫ್ (23) ಎಂದು ಗುರುತಿಸಲಾಗಿದೆ.. ಇವರೆಲಲ್ಲರೂ ಟ್ಯಾಕ್ಸಿ ಚಾಲಕರಾಗಿದ್ದಾರೆ.
ಜುಲೈ 6ರ ಸಂಜೆ ಸಂತ್ರಸ್ತೆಯು ತನ್ನ ಸ್ನೇಹಿತೆ ಮನೆಯಿಂದ ಹಿಂದಿರುಗುತ್ತಿದ್ದಳು. ವಸಂತ್ ವಿಹಾರ್ ಮಾರುಕಟ್ಟೆಯಲ್ಲಿ ಇಬ್ಬರು ಆರೋಪಿಗಳನ್ನು ಸಂತ್ರಸ್ತೆ ಭೇಟಿಯಾಗಿದ್ದಾಳೆ. ಅವರು ಆಕೆಯ ಸುತ್ತಮುತ್ತ ತಿರುಗಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ಸಂತ್ರಸ್ತೆಯ ಬಳಿಗೆ ಕಾರನ್ನು ತೆಗೆದುಕೊಂಡು ಹೋಗಿ ಆಕೆಯ ಮುಖಕ್ಕೆ ಮದ್ಯವನ್ನು ಎಸೆದು ಕಾರಿನಲ್ಲಿ ಅಪಹರಿಸಿದ್ದಾರೆ.
ನಂತರ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಗರದಾದ್ಯಂತ ಕಾರು ಓಡಿಸುತ್ತ ಆಕೆಯನ್ನ ಮೃಗಗಳಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಕೃತ್ಯದ ವೀಡಿಯೋ ಕೂಡ ಮಾಡಿಕೊಂಡಿದ್ದಾರೆ..