ದೆಹಲಿಯಲ್ಲಿ ಲಾಕ್ ಡೌನ್ ಸಡಿಲ – ಜಿಮ್ ಗಳ ತೆರೆಯಲು ಅನುಮತಿ
ನವದೆಹಲಿ : ಕೆಲ ತಿಂಗಳ ಹಿಂದೆ ಇಡೀ ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದ ರಾಜ್ಯ ರಾಷ್ಟ್ರ ರಾಜಧಾನಿ ದೆಹಲಿಯೇ ಆಗಿತ್ತು.. ಆನಂತರ ಅಲ್ಲಿನ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರ ತೆಗೆದುಕೊಂಡ ಕೆಲ ಮಹತ್ವದ ನಿರ್ಧಾರಗಳು , ಕೋವಿಡ್ ತಡೆಗೆ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇದೀಗ ದೆಹಲಿಯಲ್ಲಿ ಕೊರೊನಾ ಅಬ್ಬರ ತೀರಾ ಕಡಿಮೆಯಾಗಿದೆ… ಸಾವಿನ ಸಂಖ್ಯೆ ಸೋಂಕಿತರ ಸಮಖ್ಯೆ ಅದ್ರಲ್ಲೂ ಆಕ್ಟೀವ್ ಕೇಸಸ್ ಗಳ ಸಂಖ್ಯೆ ಕಡಿಮೆಯಾಗಿದೆ..
ಸದ್ಯ ರಾಜ್ಯಾದ್ಯಂತ ವಿಧಿಸಲಾಗಿದ್ದ ಲಾಕ್ ಡೌನ್ ಸಡಿಲಿಕೆ ಮಾಡಲಾಗ್ತಿದ್ದು, ಹಂತಹಂತವಾಗಿ ನಿಯಮಗಳನ್ನ ಸಡಿಲಿಸಿಕೊಂಡು ಬರುತ್ತಿದೆ.. ಇದೀಗ 50 ಜನರ ಸಾಮರ್ಥ್ಯದೊಂದಿಗೆ ಬ್ಯಾಂಕ್ವೆಂಟ್ ಹಾಲ್, ಮದುವೆ ಹಾಲ್ ಗಳು, ಹೋಟೆಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು ಸಾಮರ್ಥ್ಯದ ಶೇಕಡಾ 50ರೊಂದಿಗೆ ಮುಂದಿನ ವಾರದಿಂದ ಯೋಗ ಸಂಸ್ಥೆಗಳು, ಜಿಮ್ ಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗಿದೆ. ದೆಹಲಿಯಲ್ಲಿ ಸುಮಾರು 9 ಸಾವಿರ ಜಿಮ್ ಗಳಿದ್ದು, ಜಿಮ್ ಗಳ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಹಲವು ದಿನಗಳಿಂದ ಮಾಲೀಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದರು.








