ಮುಂದಿನ ಒಂದು ದಶಕ ಟೀಂ ಇಂಡಿಯಾದಲ್ಲಿ ರಾಹುಲ್ ದರ್ಬಾರ್..! kl-rahul saaksha tv
ವಾಂಡರರ್ಸ್ : ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಹಂಗಾಮಿ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಕೆ.ಎಲ್ ರಾಹುಲ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಟೀಂ ಇಂಡಿಯಾ ಪರ ಮೂರು ಮಾದರಿ ಕ್ರಿಕೆಟ್ ನಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ರಾಹುಲ್, ಭಾರತೀಯ ಕ್ರಿಕೆಟ್ ನ ನಯಾ ಸೆನ್ಸೇಷನ್ ಆಗಿದ್ದಾರೆ.
ಹೀಗಾಗಿ ಕೆಎಲ್ ರಾಹುಲ್ ಅವರನ್ನು ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಂ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಮುಂದಿನ ಒಂದು ದಶಕದ ಕಾಲ ಟೀಂ ಇಂಡಿಯಾದಲ್ಲಿ ರಾಹುಲ್ ಅಬ್ಬರ ನಡೆಯಲಿದೆ. ಅವರು ನಾಯಕರಾಗಿ ದೊಡ್ಡಮಟ್ಟಕ್ಕೆ ಬೆಳೆಯುತ್ತಾರೆ ಎಂದು ಕರೀಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಗೈರಿನಲ್ಲಿ ರಾಹುಲ್ ಗೆ ಟೀಂ ಇಂಡಿಯಾದ ನಾಯಕತ್ವ ವಹಿಸಿರೋದು ಸರಿಯಾದ ನಿರ್ಧಾರ ಎಂದು ಅವರು ಭಾವಿಸಿದ್ದಾರೆ.
ಟೆಕ್ನಿಕ್ ನೊಂದಿಗೆ ಆಕ್ರಮಣಕಾರಿ ಪ್ರದರ್ಶನ ನೀಡುವುದರಲ್ಲಿ ರಾಹುಲ್ ನಿಸ್ಸೀಮ. ಇದೇ ಪ್ರದರ್ಶನವನ್ನು ಮುಂದುವರೆಸಿದ್ರೆ ರಾಹುಲ್ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಕರೀಂ ಹೇಳಿದ್ದಾರೆ.
ಇನ್ನು ರಾಹುಲ್ ಈಗಾಗಲೇ ಬ್ಯಾಟರ್ ಆಗಿ ಮಾತ್ರವಲ್ಲದೆ ನಾಯಕರಾಗಿಯೂ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ.
ಭವಿಷ್ಯದಲ್ಲಿ ಎಲ್ಲಾ ಫಾರ್ಮ್ಯಾಟ್ಗಳಲ್ಲಿ ರಾಹುಲ್ ನಾಯಕನಾಗಿ ನೇಮಕಗೊಂಡರೆ, ತಂಡಕ್ಕೆ ಆನೆಬಲದೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟರ್ ಆಗಿ ಅವರು ಬೆಳೆಯುತ್ತಾರೆ.
ಯಾರಿಂದಲೂ ಸಾಧ್ಯವಾಗದ ಹಲವು ದಾಖಲೆಗಳನ್ನು ನಿರ್ಮಿಸಲಿದ್ದಾರೆ ಎಂದು ಹಾರೈಸಿದರು.









