ನೈಟ್‌ ನ್ಯೂಸ್ ಅಪ್ ಡೇಟ್

ನೈಟ್‌ ನ್ಯೂಸ್ ಅಪ್ ಡೇಟ್

1. ರಾಜ್ಯದಲ್ಲಿಂದು 946 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ : ರಾಜ್ಯದಲ್ಲಿ ‌ಇಂದು ಒಂದೇ ದಿನ 947 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15242ಕ್ಕೆ ಏರಿಕೆಯಾಗಿದ್ದು, ಮಂಗಳವಾರ 20 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

2. ನವೆಂಬರ್ ವರೆಗೆ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನಾವನ್ನು ವಿಸ್ತರಿಸಿದ ಪ್ರಧಾನಿ : ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನಾ ನವೆಂಬರ್ ತನಕ ಮುಂದುವರಿಯಲಿದ್ದು ನವೆಂಬರ್ ಅಂತ್ಯದವರೆಗೆ ಉಚಿತ ಪಡಿತರ ವಿತರಣೆ ಆಗಲಿದೆ ಎಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಹೇಳಿದ್ದಾರೆ

3. ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಎಲ್ಲರೂ ಒಟ್ಟಾಗಿ ಕೊರೋನಾ ತಡೆಯೋಣ – ಬಿಎಸ್ ಯಡಿಯೂರಪ್ಪ : ಪ್ರಧಾನಿ ಮೋದಿ ಕರೆಕೊಟ್ಟಂತೆ ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕನ್ನು ಬಳಸಿ ಆರೋಗ್ಯ ಕಾಪಾಡಿಕೊಂಡು ಕೊರೋನಾ ಸೋಂಕಿನ ವಿರುದ್ಧ ಹೋರಾಡೋಣ ಎಂದು ಸಿಎಂ ಯಡಿಯೂರಪ್ಪ ಕರೆ ನೀಡಿದ್ದಾರೆ.

4. ಕೊರೋನಾ ಚಿಕಿತ್ಸೆ ಬಗ್ಗೆ ವಿವರ ತಿಳಿಯುವ ಹಕ್ಕು ರೋಗಿಗಳಿಗಿದೆ – ಸಿದ್ದರಾಮಯ್ಯ : ಕೊರೋನಾ ಪೀಡಿತರಿಗೆ ತಾನು ಪಡೆಯುತ್ತಿರುವ ಚಿಕಿತ್ಸೆಯ ವಿವರ ತಿಳಿಯುವ ಕಾನೂನುಬದ್ದ ಹಕ್ಕಿದೆ. ಸೋಂಕಿತರಿಗೆ ನೀಡುತ್ತಿರುವ ಔಷಧಿ ಏನು ಎಂಬುದನ್ನು ತಿಳಿಸದೆ ಇರುವುದು ತಪ್ಪು ಎಂದು ಸಿದ್ದರಾಮಯ್ಯ ಖಂಡಿಸಿದ್ದಾರೆ.

5. ಆ್ಯಪ್‌ ‌ನಿಷೇಧವಷ್ಟೇ ಸಾಲದು, ಚೀನಾಕ್ಕೆ ತಕ್ಕ ಉತ್ತರ ನೀಡಿ – ಮಮತಾ ಬ್ಯಾನರ್ಜಿ : ಆ್ಯಪ್‌ಗಳನ್ನು ನಿಷೇಧಿಸಿದರಷ್ಟೇ ಸಾಲದು, ಚೀನಾಕ್ಕೆ ತಕ್ಕ ಉತ್ತರವನ್ನು ನೀಡಬೇಕಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This