ನೈಟ್ ನ್ಯೂಸ್ ಅಪ್ಡೇಟ್
1.
ಭಾರತ ಅಗತ್ಯತೆಗಳನ್ನು ಮೀರಿ ಮಿಲಿಟರಿ ಸಾಮರ್ಥ್ಯಗಳನ್ನು ಸಂಗ್ರಹಿಸುತ್ತಿದೆ – ಪಾಕಿಸ್ತಾನ ಆರೋಪ :
ಭಾರತದ ರಫೆಲ್ ಫೈಟರ್ ಜೆಟ್‌ಗಳಿಂದ ಆತಂಕಕ್ಕೆ ಒಳಗಾಗಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಭಾರತ ತನ್ನ ನಿಜವಾದ ಭದ್ರತಾ ಅಗತ್ಯತೆಗಳನ್ನು ಮೀರಿ ಮಿಲಿಟರಿ ಸಾಮರ್ಥ್ಯಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದೆ.
2.
ಲಂಡನ್ ಗೆ ಕಳ್ಳಸಾಗಣೆ ಮಾಡಲಾಗಿದ್ದ ಒಂಬತ್ತನೇ ಶತಮಾನದ ಅಪರೂಪದ ಶಿವನ ಪ್ರತಿಮೆ ಮರಳಿ ಭಾರತಕ್ಕೆ : ರಾಜಸ್ಥಾನದ ದೇವಾಲಯವೊಂದರಿಂದ ಕದ್ದು ಯುಕೆಗೆ ಕಳ್ಳಸಾಗಣೆ ಮಾಡಲಾಗಿದ್ದ ಒಂಬತ್ತನೇ ಶತಮಾನದ ಅಪರೂಪದ ಶಿವನ ಪ್ರತಿಮೆ ಪುರಾತತ್ವ ಸರ್ವೇ ಆಫ್ ಇಂಡಿಯಾ (ಎಎಸ್‌ಐ) ಗೆ ಹಸ್ತಾಂತರವಾಗಲಿದೆ.
ಇದು ಸುಮಾರು ನಾಲ್ಕು ಅಡಿ ಎತ್ತರದಲ್ಲಿರುವ, ಪ್ರತಿಹರ ಶೈಲಿಯಲ್ಲಿನ ನಟರಾಜ ನ ಭಂಗಿಯಲ್ಲಿರುವ ಶಿವನ ಅಪರೂಪದ ಚಿತ್ರಣವಾಗಿದೆ.
3.
ತ್ರೇತಾಯುಗದ ರಾಮನಂತೆ ಮಾತಿಗೆ ತಪ್ಪದ ದಾಮೋದರ್ ದಾಸ್ ನರೇಂದ್ರ ಮೋದಿ : .ಪ್ರಧಾನಿ ಮೋದಿ ಅವರು ಆಗಸ್ಟ್ 5 ರಂದು ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆಯನ್ನು ಮಾಡಲಿದ್ದಾರೆ. ಜೊತೆಗೆ ಅವರು ಈ ಹಿಂದೆ ಮಾಡಿದ ಮಾತನ್ನು ಸಹ ಈಡೇರಿಸಲಿದ್ದಾರೆ.
4.
ಭಾರತ ವಿಕಲಚೇತನ ಕ್ರಿಕೆಟ್ ತಂಡದ ಮಾಜಿ ನಾಯಕ ಜವಾನ ಕೆಲಸಕ್ಕಾಗಿ ಅಲೆದಾಟ..! : ದಿನೇಶ್ ಸೇನ್.. ಭಾರತ ವಿಕಲಚೇತನ ಕ್ರಿಕೆಟ್ ತಂಡದ ಮಾಜಿ ನಾಯಕ. 2015 ರಿಂದ 2019ರವರೆಗೆ ಭಾರತ ವಿಕಲ ಚೇತನ ಕ್ರಿಕೆಟ್ ತಂಡಕ್ಕೆ ನಾಯಕತ್ವ ವಹಿಸಿದ್ದರು.
5.
150 ದಿನ ವಿರಹ ವೇದನೆಯಲ್ಲಿರಬೇಕಾಗುತ್ತೆ ಟೀಮ್ ಇಂಡಿಯಾ ಆಟಗಾರರು..! : ಟೀಮ್ ಇಂಡಿಯಾ ಆಟಗಾರರು ತಮ್ಮ ಪತ್ನಿ, ಕುಟುಂಬದ ಸದಸ್ಯರಿಂದ ಸುಮಾರು 150 ದಿನ ದೂರ ಇರಲೇಬೇಕು. ? ಹಾಗಂತ ಇದು ಯಾವುದೇ ಶಿಕ್ಷೆ ಅಲ್ಲ. ಬದಲಾಗಿ ಇದು ಕೊರೋನಾ ಸೋಂಕಿನ ಎಫೆಕ್ಟ್.