ತಾತನಾಗುತ್ತಿರುವ ಸಂತೋಷವನ್ನು ಹಂಚಿಕೊಂಡ ಕುಮಾರಸ್ವಾಮಿ – ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್ ರೇವತಿ ದಂಪತಿ
ನಿಖಿಲ್ ಹಾಗೂ ರೇವತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇಂದು ರೇವತಿ ಅವರ ಹುಟ್ಟುಹಬ್ಬವಾಗಿದ್ದು, ಎಚ್.ಡಿ. ಕುಮಾರಸ್ವಾಮಿ ಅವರು ತಾನು ತಾತನಾಗುತ್ತಿರುವ ಸಂತೋಷವನ್ನು ಮಾಧ್ಯಮದ ಜೊತೆಗೆ ಹಂಚಿಕೊಂಡಿದ್ದಾರೆ. ರೇವತಿ ಅವರಿಗೆ ಈಗ ಐದು ತಿಂಗಳಾಗಿದ್ದು ನಿಖಿಲ್ ಹಾಗೂ ರೇವತಿ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಗೌಡರ ಕುಟುಂಬವು ಹೊಸ ಅತಿಥಿಯ ಆಗಮನಕ್ಕಾಗಿ ತಯಾರಿ ನಡೆಸಿದ್ದು, ಅಭಿಮಾನಿಗಳು ಈ ವಿಷಯ ತಿಳಿಯುತ್ತಿದ್ದಂತೆ ಸಂಭ್ರಮಿಸುತ್ತಿದ್ದಾರೆ.
ರೇವತಿ ತಮ್ಮ ಹುಟ್ಟುಹಬ್ಬವನ್ನು ಅಂಗವಿಕಲರೊಂದಿಗೆ ಆಚರಿಸಿಕೊಂಡಿದ್ದು, ಅವರಿಗೆ ಬಟ್ಟೆ ಹಾಗೂ ಸಿಹಿ ನೀಡುವ ಮೂಲಕ ನಿಖಿಲ್ ಮತ್ತು ರೇವತಿ ದಂಪತಿಗಳು ಸಂಭ್ರಮಿಸಿದ್ದಾರೆ.
#Nikhil #Revati








