ರಿಯಲ್ ನಲ್ಲೂ ಜೋಡಿಯಾದ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ
2015ರಲ್ಲಿ ತೆರೆಕಂಡ ‘ಯಾಗವರಾಯಿನುಮ್ ನಾ ಕಾಕ್ಕಾ ಚಿತ್ರದಲ್ಲಿ ಜೋಡಿಯಾಗಿದ್ದ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ ನಿಜ ಜೀವನದಲ್ಲಿಯೂ ಜೋಡಿ ಆಗಿದ್ದಾರೆ. ಹೌದು ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅವರ ಸಹೋದರಿ, ಬಹುಭಾಷಾ ನಟಿ ನಿಕ್ಕಿ ಗಲ್ರಾನಿ ಅವರ ಎಂಗೇಜ್‌ಮೆಂಟ್ ಸದ್ದಿಲ್ಲದೇ ಆಗಿದೆ. ಈ ಸಿಹಿ ಸುದ್ದಿಯನ್ನು ತಮ್ಮ ಟ್ವೀಟ್ ರ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಶಾಕ್ ನೀಡಿದ್ದಾರೆ.
ಅಂದಹಾಗೆ, ಅವರು ಎಂಗೇಜ್ ಆಗಿರುವುದು ಖ್ಯಾತ ನಟಾ ಆದಿ ಪಿನಿಸೆಟ್ಟಿ ಜೊತೆ ಆಗಿದೆ. ಈ ಹಿಂದ ನಿಕ್ಕಿ ಮತ್ತು ಆದಿ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಹಲವು ವರ್ಷಗಳ ಹಿಂದೆಯೇ ನಿಕ್ಕಿ ಮತ್ತು ಆದಿ ಕುರಿತಂತೆ ಇಂಥದ್ದೊಂದು ಸುದ್ದಿ ಹರಿದಾಡಿತ್ತು. ಇಬ್ಬರು ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ, ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಆದರೆ ಇದಕ್ಕೆ ಈ ಜೋಡಿ ಯಾವುದೇ ಪ್ರತಿಕ್ರಿಯೇ ನೀಡಿರಲಿಲ್ಲ.
The best thing to hold onto in life is each other.
We found each other a couple of years ago & it’s official now💍
24.3.22 was really special to us.
We got engaged in the presence of both our families🌸
Seeking all you love & blessings as we take on this new journey together🙏🏻♥️ pic.twitter.com/hrMbxieCAn— Nikki Galrani Pinisetty (@nikkigalrani) March 26, 2022
2020ರಲ್ಲಿ ಆದಿ ಪಿನಿಸೆಟ್ಟಿ ಅವರ ತಂದೆ ರವಿ ರಾಜ ಪಿನಿಸೆಟ್ಟಿ ಜನ್ಮದಿನ ಸಮಾರಂಭದಲ್ಲಿ ನಿಕ್ಕಿ ಭಾಗಿಯಾಗಿದ್ದರು. ಆ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಕುಟುಂಬದವರಷ್ಟೇ ಇದ್ದರು. ಅವರ ಜೊತೆಗೆ ನಿಕ್ಕಿ ಇರುವ ಫೋಟೋಗಳು ಆಗ ವೈರಲ್ ಆಗಿದ್ದವು. ಆಗಿನಿಂದಲೇ ಈ ಜೋಡಿಯ ಪ್ರೇಮ್ ಕಹಾನಿ ಬಗ್ಗೆ ವದಂತಿ ಬಲವಾಗಿತ್ತು.
ಇದೀಗ ಇಬ್ಬರು ಎಂಗೇಜ್ ಆಗುವ ಮೂಲಕ ಪ್ರೀತಿಸುತ್ತಿದ್ದೇವೆ, ಶೀಘ್ರದಲ್ಲೇ ಮದುವೆ ಆಗಲಿದ್ದೇವೆ ಎಂಬುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಇಬ್ಬರು ಸಪ್ತಪದಿ ತುಳಿಯಲು ರೆಡಿ ಆಗಿದ್ದಾರೆ.