ಕಾರ್ಗೋ ಹಡಗು ಮುಳುಗಡೆ | 9 ಟ್ರಕ್ ಗಳು ನೀರುಪಾಲು
ಜಾರಖಂಡ: 17 ಟ್ರಕ್ ಗಳನ್ನು ಸಾಗಿಸುತ್ತಿದ್ದ, ಕಾರ್ಗೋ ಹಡಗು ಭಾಗಶಃ ಮುಳಗಡೆಯಾಗಿದ್ದು, 9 ಜನರು ನೀರುಪಾಲಗಿರುವ ಘಟನೆ ತಡರಾತ್ರಿ ಜಾರಖಂಡನ ಸಾಹಿಬ್‌ಗಂಜ್ ನ ಗಂಗಾ ನದಿಯಲ್ಲಿ ಸಂಭವಿಸಿದೆ.
ಹಡಗು ಭಾಗಶಃ ಮುಳುಗಿದೆ. ಗುರುವಾರ ರಾತ್ರಿ 12 ರಿಂದ 1:00 ರ ಸುಮಾರಿಗೆ ಅಂತಾರಾಜ್ಯ ದೋಣಿ ಸೇವೆ ಘಾಟ್ ಸಾಹಿಬ್‌ಗಂಜ್ ಮತ್ತು ಮಣಿಹಾರಿ ನಡುವೆ ಸಾಗುತ್ತಿದ್ದ ಸರಕು ಸಾಗಣೆ ಹಡಗು ಕಾರ್ಗೋ 17 ಓವರ್‌ಲೋಡ್ ಟ್ರಕ್ ತುಂಬಿಕೊಂಡು ಗಂಗಾನದಯಲ್ಲಿ ಮಣಿಹಾರಿಗೆ ಸಾಗುತ್ತಿತ್ತು.
ಗಂಗೆಯ ಮಧ್ಯದಲ್ಲಿ ಬಲವಾದ ಗಾಳಿ ಬೀಸಿದ ಕಾರಣ ಹಡಗು ನಿಯಂತ್ರಣ ಕಳೆದುಕೊಂಡಿದ್ದು, ಅರ್ಧ ಭಾಗ ನೀರಿನಲ್ಲಿ ಮುಳುಗಿದೆ. ಈ ವೇಳೆ 9 ಟ್ರಕ್‌ಗಳು ಗಂಗಾನದಿಯ ಮಧ್ಯದಲ್ಲಿ ನೀರುಪಾಲಾಗಿವೆ. ಅದರ ಜೊತೆ ಡ್ರೈವರ್ ಮತ್ತು ಕ್ಲಿನರ್ ಸೇರಿದಂತೆ ಹಲವು ಮಂದಿ ನೀರುಪಾಲು ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಇನ್ನು ಈ ಸುದ್ದಿ ಮುಫಾಸಿಲ್ ಪೊಲೀಸ್ ಠಾಣೆ ಪೊಲೀಸರಿಗೆ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜನರನ್ನು ರಕ್ಷಿಸಲು ರಕ್ಷಣಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ರಾತ್ರಿ ವೇಳೆ ಸರಕು ಸಾಗಣೆ ನೌಕೆ ನಡೆಸುವುದು ಕಾನೂನು ಬಾಹಿರವಾಗಿದೆ. ದೊಡ್ಡ ದುರಂತವಾಗಿರುವ ಕಾರಣಕ್ಕೆ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ.