ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟೀವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಎಲ್ಲಾ ನಾಲ್ವರು ಅಪರಾಧಿಗಳ ಕ್ಯುರೇಟಿವ್ ಅರ್ಜಿ ವಜಾಗೊಂಡಿದೆ. ಆದ್ರೆ ಪವನ್ ಗುಪ್ತಾ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶವಿದೆ. ಉಳಿದ ಮೂವರು ಅಪರಾಧಿಗಳಾದ ಮುಖೇಶ್ ಕುಮಾರ್ ಸಿಂಗ್, ವಿನಯ್ ಕುಮಾರ್ ಶರ್ಮಾ ಹಾಗೂ ಅಕ್ಷಯ್ ಕುಮಾರ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನ ರಾಷ್ಟ್ರಪತಿಗಳು ಈಗಾಗಲೇ ವಜಾ ಮಾಡಿದ್ದಾರೆ.
ತಮ್ಮ ಕ್ಷಮಾದಾನ ಅರ್ಜಿ ವಜಾ ಆಗಿದ್ದನ್ನು ಪ್ರಶ್ನಿಸಿ ಮುಕೇಶ್ ಕುಮಾರ್ ಸಿಂಗ್ ಹಾಗೂ ವಿನಯ್ ಶರ್ಮಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲೂ ಕೂಡ ಅವರಿಗೆ ಹಿನ್ನಡೆಯಾಗಿದ್ದು ಅರ್ಜಿಯನ್ನ ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿತ್ತು.
fifa world cup 2026- 35 ವರ್ಷಗಳ ಇತಿಹಾಸ, ವಿಶ್ವಕಪ್‌ನಲ್ಲಿ ಸೃಷ್ಟಿಸಿದ್ರು ಇತಿಹಾಸ! ಲೂಕಾ ಮಾಡ್ರಿಕ್ ಕಣ್ಣೀರ ವಿದಾಯದೊಂದಿಗೆ ಮುಗಿಯಿತೇ ಕ್ರೊವೇಶಿಯಾದ ಸುವರ್ಣ ಯುಗ?”
ಕ್ರೊವೇಶಿಯಾ..! ಜಗತ್ತಿನ ಒಂದು ಪುಟ್ಟ ರಾಷ್ಟ್ರ. ಅಂದಾಜು 42 -43 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದೇಶ. ಆದ್ರೆ ಈ ದೇಶಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವೂ ಇದೆ....








