ಮೈತ್ರಿ ಇಲ್ಲ.. ಒಂಟಿಯಾಗಿ ಕಾಂಗ್ರೆಸ್ ಸ್ಪರ್ಧೆ : ಪ್ರಿಯಾಂಕಾ ಗಾಂಧಿ

1 min read
Priyanka Gandhi

ಮೈತ್ರಿ ಇಲ್ಲ.. ಒಂಟಿಯಾಗಿ ಕಾಂಗ್ರೆಸ್ ಸ್ಪರ್ಧೆ : ಪ್ರಿಯಾಂಕಾ ಗಾಂಧಿ

ಲಕ್ನೋ : ಮುಂದಿನ ವರ್ಷ ಆರಂಭದಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ.

ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿವೆ.

ಈ ಮಧ್ಯೆ ಈ ಹಿಂದೆ ನಡೆದಿದ್ದ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ಕಾಂಗ್ರೆಸ್, ಮುಂದಿನ ಚುನಾವಣೆಯಲ್ಲಿ ಒಂಟಿಯಾಗಿ ಅಖಾಡಕ್ಕಿಳಿಯಲಿದೆ.

ಹೌದು..! ಉತ್ತರಪ್ರದೇಶದಲ್ಲಿ ಸದ್ಯ ಯೋಗಿ ಹವಾ ಜೋರಾಗಿದೆ. ಇದಕ್ಕೆ ವಿರುದ್ಧವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಬಾವುಟ ಹಾರಿಸಲು ಭಾರಿ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.

Priyanka Gandhi saaksha tv

ಹೀಗಾಗಿ ಸಾಕಷ್ಟು ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಪ್ರಮುಖವಾಗಿ ಮುಂದಿನ ಚುನಾವಣೆಯಲ್ಲಿ ಶೇಕಡಾ 40 ರಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ನೀಡಲು ಕಾಂಗ್ರೆಸ್ ಚಿಂತನೆ ನೀಡಿದೆ.

ಇದೀಗ ಮೈತ್ರಿ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದು, ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುಣಾವಣೆಯಲ್ಲಿ ಇತರ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಯ ಯಾವುದೇ ಸಾಧ್ಯತೆಗಳು ಇಲ್ಲ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮಾತ್ರ ನಾವು ನಾಮನಿರ್ದೇಶನ ಮಾಡುತ್ತೇವೆ. ಒಂದು ವೇಳೆ ಕಾಂಗ್ರೆಸ್ ಗೆಲುವು ಸಾಧಿಸಿದರೆ ಅದು ತನ್ನ ಸ್ವಂತ ಸಾಮಥ್ರ್ಯದಿಂದ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd