ಜೂನ್ 7 ರ ನಂತರ ಲಾಕ್ ಡೌನ್ ಬೇಡ : ಎಸ್.ಟಿ.ಸೋಮಶೇಖರ್
ಮೈಸೂರು : ಜೂನ್ ಏಳರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಬೇಡ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ತಿಂಗಳಿಂದ ಲಾಕ್ ಡೌನ್ ಆಗಿದೆ.
ಜೂನ್ 7 ರ ನಂತರ ಲಾಕ್ ಡೌನ್ ವಿಸ್ತರಣೆ ಮಾಡುವುದು ಬೇಡ. ಎರಡು ತಿಂಗಳಿಂದ ಲಾಕ್ ಡೌನ್ ಆಗಿರುದುದರಿಂದ ದಿನ ಕೂಲಿ ಮಾಡಿ ಜೀವನ ಮಾಡುವವರ ಜೀವನ ಈಗಲೇ ಕಷ್ಟವಾಗಿದೆ.
ಹೀಗಾಗಿ ಜೂನ್ 7 ರ ನಂತರ ಲಾಕ್ ಡೌನ್ ಮುಂದುವರೆಸುವುದು ಬೇಡ ಎಂದು ಅಭಿಪ್ರಾಯಪಟ್ಟರು.
ಇನ್ನು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಸಿದರೆ ಕಷ್ಟವಾಗುತ್ತೆ. ಸಿಎಂ ಅಭಿಪ್ರಾಯ ಕೇಳಿದರೆ ಇದೆ ಅಭಿಪ್ರಾಯವನ್ನು ತಿಳಿಸುತ್ತೇನೆ.
ಈಗಾಗಲೇ ಕೊರೊನಾ ಪ್ರಕರಣ ಇಳಿಮುಖವಾಗುತ್ತಿದೆ. ಇದರಿಂದ ಲಾಕ್ ಡೌನ್ ಮುಂದುವರೆಸುವುದು ಬೇಡ ಎಂದು ಎಸ್.ಟಿ.ಸೋಮಶೇಖರ್ ಪುನರುಚ್ಚರಿಸಿದರು.