ಕೊರೊನಾ ಲಾಕ್ ಡೌನ್ ಬಗ್ಗೆ ಮೋದಿ ಸ್ಪಷ್ಟನೆ

1 min read
lock-down

ಕೊರೊನಾ ಲಾಕ್ ಡೌನ್ ಬಗ್ಗೆ ಮೋದಿ ಸ್ಪಷ್ಟನೆ

ದೆಹಲಿ: ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಲಸಿಕೆಯನ್ನು ತ್ವರಿತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದ್ದಾರೆ.

ದೇಶದಾದ್ಯಂತ ಕೊರೊನಾ ಹೆಚ್ಚಳ ಹಿನ್ನೆಲೆ ಗುರುವಾರ ದೇಶದಲ್ಲಿರುವ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಈ ವೇಳೆ ದೇಶಾದ್ಯಂತ ಮತ್ತೊಮ್ಮೆ ಲಾಕ್ ಡೌನ್ ಇರುವುದಿಲ್ಲ ಎಂಬುದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಏಪ್ರಿಲ್ 11ರಿಂದ 14ರವರೆಗೆ ಲಸಿಕೆ ಉತ್ಸವ ನಿರ್ವಹಿಸಲು ನಿರ್ಣಯಿಸಿದ್ದಾರೆ.

ಅಲ್ಲದೆ ಕೊರೊನಾಗೆ ಕಡಿವಾಣ ಹಾಕಲು ರಾಜ್ಯಗಳ ಮುಖ್ಯಮಂತ್ರಿಗಳು ಕ್ರಮತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

lock-down

ಇನ್ನು ಕೊರೊನಾದಿಂದಾಗಿ ದೇಶ ಮತ್ತೊಮ್ಮೆ ಸವಾಲುಗಳನ್ನ ಎದುರಿಸುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳುವಂತೆ ಪ್ರಧಾನಿ ಸಿಎಂಗಳಿಗೆ ತಿಳಿಸಿದ್ದಾರೆ.

ಲಸಿಕೆಗಿಂತ ಪರೀಕ್ಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಆರ್ ಟಿಪಿಸಿಆರ್ ಪರೀಕ್ಷೆಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಬೇಕು ಮತ್ತು ಎಲ್ಲರೂ ಕೋವಿಡ್ ಪರೀಕ್ಷೆಗಳಿಗೆ ಒಳಗಾಗಬೇಕು.

ಕೋವಿಡ್ ವಿರುದ್ಧ ಮತ್ತೆ ಯುದ್ಧೋಪಾದಿಯಲ್ಲಿ ಹೋರಾಟಕ್ಕೆ ಸಿದ್ಧರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳಿಗೆ ಕರೆ ನೀಡಿದರು.

ನಾವು ಮೊದಲ ಅಲೆಯನ್ನು ಗೆದ್ದಿದ್ದೇವೆ. ಎರಡನೆಯ ಅಲೆಯನ್ನೂ ಗೆಲ್ಲಬಹುದು ಎಂಬುದು. ರಾತ್ರಿ ಕಫ್ರ್ಯೂ ಕೊರೊನಾ ನಿಯಂತ್ರಣಕ್ಕೆ ಪರ್ಯಾಯವಾಗಿದೆ ಎಂದು ಪಿಎಂ ಹೇಳಿದರು.

belagavi
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd