ದೇಶದಲ್ಲಿ ಸೆಪ್ಟೆಂಬರ್ 25 ರಿಂದ ಮತ್ತೊಮ್ಮೆ ಲಾಕ್ ಡೌನ್ ಇಲ್ಲ – ಪ್ರೆಸ್ ಬ್ಯೂರೋ ಆಫ್ ಇಂಡಿಯಾ
ಹೊಸದಿಲ್ಲಿ, ಸೆಪ್ಟೆಂಬರ್15: ಕೋವಿಡ್-19 ಸೋಂಕು ಪ್ರಕರಣ ದೇಶದಲ್ಲಿ ದಿನೇ ದಿನೆ ಏರಿಕೆಯಾಗುತ್ತಿದೆ. ಈ ನಡುವೆ , ಸೆಪ್ಟೆಂಬರ್ 25ರಿಂದ ಮತ್ತೆ 46 ದಿನಗಳ ಲಾಕ್ ಡೌನ್ ಹೇರಲಾಗುವುದು ಎಂಬ ಸುದ್ದಿ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಪ್ರೆಸ್ ಬ್ಯೂರೋ ಆಫ್ ಇಂಡಿಯಾ (ಪಿಐಬಿ) ಇದನ್ನು ನಿರಾಕರಿಸಿದ್ದು, ಅಂತಹ ಯಾವುದೇ ಚಿಂತನೆಗಳನ್ನು ಸರ್ಕಾರ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ್ದೆಂದು ಹೇಳಲಾಗಿರುವ ಆದೇಶದ ಪ್ರತಿ ಕೂಡ ವೈರಲ್ ಆಗಿದ್ದು, ಅದರಲ್ಲಿ ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಮತ್ತೆ 46 ದಿನಗಳ ಕಾಲ ದಿಗ್ಬಂಧನ ಜಾರಿ ಮಾಡಬೇಕೆಂದು, ಸ್ವತಃ ಪ್ರಧಾನಮಂತ್ರಿ ಕಚೇರಿ, ಕೇಂದ್ರ ಗೃಹಕಚೇರಿಗೇ ನಿರ್ದೇಶನ ನೀಡಿದೆ! ಎಂಬ ಮಾಹಿತಿ ಇದೆ.
ಆದರೆ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ(ಎನ್ಡಿಎಂಎ) ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಅಂತಹ ಯಾವುದೇ ಆದೇಶ ಹೊರಡಿಸಿಲ್ಲ ಎಂದು ತಿಳಿಸಿದೆ.
https://twitter.com/PIBFactCheck/status/1304803151082434560?s=19