ಬೆಂಗಳೂರು: ಸಿಲಿಕಾನ್ ಸಿಟಿಯ ಮಾಂಸ ಪ್ರಿಯರಿಗೆ ನಮ್ಮ ಮೆಟ್ರೋ ಆಘಾತ ನೀಡಿದೆ. ಸರಿಯಾಗಿ ಪ್ಯಾಕ್ ಮಾಡದ ಮಾಂಸವನ್ನು ಇನ್ಮುಂದೆ ನಮ್ಮ ಮೆಟ್ರೋ ರೈಲಿನಲ್ಲಿ ಒಯ್ಯುವಂತಿಲ್ಲ ಎಂದು ಹೇಳಿದೆ. ಈ ಕುರಿತು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೆಷನ್ ಲಿಮಿಟೆಡ್ ಆದೇಶ ಹೊರಡಿಸಿದೆ. ಮೆಟ್ರೋ ರೈಲಿನಲ್ಲಿ ಯಾವುದೇ ಬಗೆಯ ಮಾಂಸ ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ವಿಧಿಸಿ, 2018ರ ರಲ್ಲೇ ಆದೇಶ ಹೊರಡಿಸಲಾಗಿದೆ. ಆದರೆ, ಮಾಂಸವನ್ನು ಸರಿಯಾಗಿ ಪ್ಯಾಕ್ ಮಾಡಿದ್ದರೆ, ಅದರಿಂದ ದುರ್ವಾಸನೆ ಬಾರದಂತಿದ್ದರೆ ಅಂತಹ ಮಾಂಸ ಒಯ್ಯಲು ಅಭ್ಯಂತರವಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ನಿನ್ನೆ ನಮ್ಮ ಮೆಟ್ರೋ ರೈಲಿನಲ್ಲಿ ಮೀನಿನ ಮಾಂಸ ಒಯ್ಯಲು ಭದ್ರತಾ ಸಿಬ್ಬಂದಿ ಬಿಡದಿರುವ ಬಗ್ಗೆ ಪ್ರಯಾಣಿಕ ಪವನ್‌ಕುಮಾರ್ ಎಂಬುವರು ಬಿಎಂಆರ್‌ಸಿಎಲ್‌ಗೆ ಟ್ವಿಟ್ಟರ್ ನಲ್ಲಿ ದೂರು ನೀಡಿದ್ದರು.
ಲೂಟಿ ಮಾಡಿ ಜೈಲಿಗೆ ಹೋದವರಿಂದ ನಾನು ಕಲಿಯಬೇಕಿಲ್ಲ:ವಂದೇ ಮಾತರಂ ಹಾಡೋಕೆ ಬರುತ್ತಾ?ರೆಡ್ಡಿ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ
ರಾಜ್ಯ ರಾಜಕಾರಣದಲ್ಲಿ ಈಗ ವಾಗ್ಯುದ್ಧದ ಪರ್ವ ಶುರುವಾಗಿದೆ. ಉಮರ್ ಖಾಲಿದ್ ವಿಚಾರವಾಗಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್...








