ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿಲ್ಲ : ಅಮಿತ್ ಶಾ
ಶ್ರೀನಗರ: ಕೆಲವು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಈಶಾನ್ಯದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿಲ್ಲದೆ ನಾವು ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶ್ರೀನಗರದ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ಸಿಆರ್‌ಪಿಎಫ್‌ನ 83ನೇ ರೈಸಿಂಗ್ ಡೇ ಪರೇಡ್‍ನಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಬೃಹತ್ ಭದ್ರತಾ ನಿಯೋಜನೆಯನ್ನು ತೆಗೆದುಹಾಕಲು ಉನ್ನತ ಮಟ್ಟದಲ್ಲಿ ಸರ್ಕಾರ ಇದೇ ಮೊದಲ ಬಾರಿಗೆ ಪ್ರಯತ್ನಿಸುತ್ತಿದೆ. ಅಲ್ಲದೇ ಕೆಲವು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಈಶಾನ್ಯದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರುವುದಿಲ್ಲ ಇದನ್ನು ಕೆಲವೇ ವರ್ಷಗಳಲ್ಲಿ ಸರಕಾರ ಈಡೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಸಿಆರ್‌ಪಿಎಫ್ ಯೋಧರ ಶ್ರಮದಿಂದಾಗಿ ಇನ್ನೂ ಕೆಲವೇ ವರ್ಷಗಳಲ್ಲಿ ಭಯೋತ್ಪಾದನಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಮೂರು ಪ್ರದೇಶಗಳಲ್ಲೂ ಸಿಆರ್‌ಪಿಎಫ್ ಅಗತ್ಯವಿಲ್ಲದೇ ನಾವು ಸಂಪೂರ್ಣವಾಗಿ ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂಬ ವಿಶ್ವಾಸವಿದೆ. ಇದರ ಸಂಪೂರ್ಣ ಪ್ರಶಂಸೆಯೂ ಸಿಆರ್‌ಪಿಎಫ್ ಯೋಧರಿಗೆ ಸಲ್ಲುತ್ತದೆ ಎಂದು ಹೇಳಿದರು.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಹೋರಾಟದ ಮೇಲೆ ಸಿಆರ್‌ಪಿಎಫ್ ನಿಯಂತ್ರಣ ತೆಗೆದುಕೊಂಡಿದೆ. ಇದು ಯೋಧರು ಜಮ್ಮು- ಕಾಶ್ಮೀರದಲ್ಲಿ ಮಾಡಿದ ದೊಡ್ಡ ಕೆಲಸವಾಗಿದೆ ಎಂದು ಪ್ರಶಂಸಿದರು.
ಕಾಶ್ಮೀರದಲ್ಲಿ ಸಿಆರ್‌ಪಿಎಫ್ ದೊಡ್ಡ ಅಸ್ತಿತ್ವವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗಾಗಿ ಸಿಆರ್‌ಪಿಎಫ್ ಸ್ಥಳೀಯ ಪೊಲೀಸರಲ್ಲದೇ, ಸೇನೆ, ಬಿಎಸ್‍ಎಫ್, ಐಟಿಬಿಪಿ ಮತ್ತು ಎಸ್‍ಎಸ್‍ಬಿ ಸಹ ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ದೆಹಲಿಯ ಸಿಆರ್‌ಪಿಎಫ್ ಪ್ರಧಾನ ಕಚೇರಿಯ ಹೊರಗೆ ಪರೇಡ್ ನಡೆಯುತ್ತಿದೆ.