ನೋ ನೈಟ್ ಕರ್ಫ್ಯೂ, ನೋ ಡೇ ಕರ್ಫ್ಯೂ : ಯಡಿಯೂರಪ್ಪ

1 min read
Night Curfew

ನೋ ನೈಟ್ ಕರ್ಫ್ಯೂ, ನೋ ಡೇ ಕರ್ಫ್ಯೂ : ಯಡಿಯೂರಪ್ಪ

ಬೆಂಗಳೂರು : ನೋ ನೈಟ್ ಕರ್ಫ್ಯೂ, ನೋ ಡೇ ಕರ್ಫ್ಯೂ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದರು. ಇದರಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಹಾರಾಷ್ಟ್ರ ಹಾಗೂ ಕೇರಳ ಗಡಿ ಭಾಗದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯ ಮದ್ವೆ,ಬೇರೆ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆ ಸೇರಬಾರದು. ಕೋವಿಡ್ ಪರಿಸ್ಥಿತಿ ಬಗ್ಗೆ ಪ್ರಧಾನಿಯವ್ರು ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಜನರಲ್ಲಿ ಭಯ ಸೃಷ್ಟಿಸುವ ಅಗತ್ಯ ಇಲ್ಲ ಅಂದ್ರು. ಲಸಿಕೆ ತಯಾರಿಕೆಗೆ ಎಲ್ಲ ಅವಕಾಶಗಳ ಬಳಕೆಗೆ ರಾಜ್ಯಗಳು ಸಹಕಾರ ಕೊಡುವಂತೆ ಹೇಳಿದ್ರು ಎಂದು ತಿಳಿಸಿದರು.

ಇನ್ನ ಕೊರೊನಾ ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲಿ 3 ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.

Night Curfew

ಇದೇ ವೇಳೆ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡುವ ವಿಚಾರವಾಗಿ ಮಾತನಾಡಿ, ಪಿಎಂ ಹಾಗೂ ಅಮಿತ್ ಷಾ ಅವರು ಕೊಟ್ಡಿರೋದು ಮೂರು ಸಲಹೆ. ಅವು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಭೆ ಸಮಾರಂಭಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು. ಸಾರ್ವಜನಿಕ ಸಭೆ ಸಮಾರಂಭದಲ್ಲಿ ಮಾಸ್ಕ್ ಕಡ್ಡಾಯಗೊಳಿಸಬೇಕು. ಸಿನಿಮಾ, ಹೋಟೆಲ್ ಮತ್ತೆಲ್ಲಾದ್ರೂ ಮಾಸ್ಕ್ ಬಳಕೆ ಕಡ್ಡಾಯ ಎಂದು ಹೇಳಿದರು.

ಕಫ್ರ್ಯೂ ವಿಧಿಸುವ ಬಗ್ಗೆ ಮಾತನಾಡಿ, ನೋ ನೈಟ್ ಕರ್ಫ್ಯೂ, ನೋ ಡೇ ಕರ್ಫ್ಯೂ ಎಂದು ಸಿಎಂ ಸ್ಪಷ್ಟನೆ ನೀಡಿದರು. ಈಗ ಏನಿದೆ ಅದೇ ರೀತಿ ಪರಿಸ್ಥಿತಿ ಮುಂದುವರಿಸುತ್ತದೆ. ಜನ ಪ್ಯಾನಿಕ್ ಆಗುವ ಅಗತ್ಯ ಇಲ್ಲ. ಹಾಗಂತ ಖುಷಿ ಬಂದ ಹಾಗೆ ಇರೋದು ಅಲ್ಲ. ಹಾಗೆ ಆದ್ರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳವುದು ಅನಿವಾರ್ಯ ವಾಗುತ್ತದೆ. ಅದಕ್ಕೆ ಅವಕಾಶ ಕೊಡದೇ ನೀವೇ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd