ಹೆಚ್ಚಿನ ನೋಟ್ ಮುದ್ರಣ ಮಾಡಲ್ಲ : ನಿರ್ಮಲಾ ಸೀತಾರಾಮನ್

1 min read
Parliament approved FDI

ಹೆಚ್ಚಿನ ನೋಟ್ ಮುದ್ರಣ ಮಾಡಲ್ಲ : ನಿರ್ಮಲಾ ಸೀತಾರಾಮನ್ nirmala sitharaman saaksha tv

ನವದೆಹಲಿ : ಆರ್ಥಿಕ ಬಿಕ್ಕಟ್ಟು, ಕೊರೊನಾ ವೈರಸ್ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹೆಚ್ಚಿನ ನೋಟು ಮುದ್ರಣ ಮಾಡುವ ಯೋಜನೆ ಅಥವಾ ಪ್ರಸ್ತಾವಣೆ ನಮ್ಮ ಮುಂದಿಲ್ಲ ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಕೊರೊನಾ ವೈರಸ್ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹೆಚ್ಚಿನ ನೋಟು ಮುದ್ರಣ ಮಾಡುವ ಯೋಜನೆ ಅಥವಾ ಪ್ರಸ್ತಾವಣೆ ನಮ್ಮ ಮುಂದಿಲ್ಲ.

nirmala sitharaman saaksha tv

ಕೋವಿಡ್ ಸೋಂಕಿನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ, ಆರ್ಥಿಕ ಚೇತರಿಕೆ ಸರಿದೂಗಿಸಲು ಹೆಚ್ಚಿನ ಕರೆನ್ಸಿ ಮುದ್ರಣ ಮಾಡುವಂತೆ ಅನೇಕ ಅರ್ಥಶಾಸ್ತ್ರಜ್ಞರು ನಮಗೆ ಸಲಹೆ ನೀಡಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಹೆಚ್ಚಿನ ನೋಟ್ ಮುದ್ರಣ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಎರಡನೇ ಹಂತದ ಕೊರೊನಾ ಸಂಕಷ್ಟದಿಂದ ನಾವು ತೊಂದರೆಗೊಳಗಾಗಿದ್ದೇವೆ. ಆದ್ರೆ 2022ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇಕಡಾ 10.5ಕ್ಕೆ ಏರಿಕೆಯಾಗಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd