ಕಲಬುರಗಿ kalaburagi : ಬೆಡ್ ಸಿಗದೇ ನಾನ್ ಕೋವಿಡ್ ರೋಗಿ ಸಾವು
ಕಲಬುರಗಿ : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಾದ್ಯಂತ ಬೆಡ್ ಗಳ ಸಮಸ್ಯೆ ಎದುರಾಗಿದೆ.
ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ನಾನಾ ಸರ್ಕಸ್ ನಡೆಸುತ್ತಿದೆ. ಈ ಮಧ್ಯೆ ಬೆಡ್ ಸಿಗದೇ ನಾನ್ ಕೋವಿಡ್ ರೋಗಿಗಳು ಕೊನೆಯುಸಿರೆಳೆಯುತ್ತಿದ್ದಾರೆ.
ಹೌದು..! ಕಲಬುರಗಿಯಲ್ಲಿ ಬೆಡ್ ಸಿಗದೇ ನಾನ್ ಕೋವಿಡ್ ರೋಗಿ ಮೃತಪಟ್ಟಿದ್ದಾರೆ. ಕಮಲಾಪೂರ ತಾಲೂಕಿನ ಭೀಮನಾಳ ಗ್ರಾಮದ ವ್ಯಕ್ತಿ ಮೃತಪಟ್ಟಿದ್ದಾನೆ. ನಿನ್ನೆ ಆಸ್ಪತ್ರೆಗೆ ದಾಖಲಾಗಲು ಇಡೀ ದಿನ ಪರದಾಡಿದ್ದು, ಎಲ್ಲೂ ಬೆಡ್ ಸಿಗದೇ ಸಾವನ್ನಪ್ಪಿದ್ದಾನೆ.
ಇಂತಹ ಪ್ರಕರಣಗಳು ರಾಜ್ಯದಾದ್ಯಂತ ವರದಿಯಾಗುತ್ತಲೇ ಇದ್ದು, ಸರ್ಕಾರ ಇಂತಹ ಪ್ರಕರಣಗಳ ಬಗ್ಗೆಯೂ ಗಮನಹರಿಸಬೇಕಾಗಿದೆ.