ಮಿಸ್ ಆಗೋಯ್ತು ವಾಷಿಂಗ್ಟನ್ ಸುಂದರ್ ನ ಸುಂದರ ಶತಕ.. ಮಹಮ್ಮದ್ ಸೀರಾಜ್ ಗೆ ಸಂಭ್ರಮಿಸುವ ಚಾನ್ಸ್ ಕಳೆದುಹೋಯ್ತು,,, ಛೇ..!

1 min read
washington sundar saakshatv team india

ಮಿಸ್ ಆಗೋಯ್ತು ವಾಷಿಂಗ್ಟನ್ ಸುಂದರ್ ನ ಸುಂದರ ಶತಕ.. ಮಹಮ್ಮದ್ ಸೀರಾಜ್ ಗೆ ಸಂಭ್ರಮಿಸುವ ಚಾನ್ಸ್ ಕಳೆದುಹೋಯ್ತು,,, ಛೇ..!

mohammad siraj r ashwin team india saakshatvಅದು ಚೆನ್ನೈ ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯ.. ಆರ್. ಅಶ್ವಿನ್ ಅವರು ಆಕರ್ಷಕ ಶತಕ ದಾಖಲಿಸಿದ್ದರು. ಆದ್ರೆ ಅಂದು ಶತಕ ದಾಖಲಿಸಿದ್ದ ಅಶ್ವಿನ್‍ಗಿಂತ ಹೆಚ್ಚು ಸಂಭ್ರಮ ಪಟ್ಟಿದ್ದು ಸಹ ಆಟಗಾರನಾಗಿದ್ದ ಮಹಮ್ಮದ್ ಸೀರಾಜ್.
ಹಾಗೇ ನೋಡಿದ್ರೆ ಮಹಮ್ಮದ್ ಸೀರಾಜ್ ಅವರ ಸಂಭ್ರಮವನ್ನು ನೋಡಿದಾಗ ಶತಕ ದಾಖಲಿಸಿದ್ದು ತಾನೇ ಎಂಬಂತೆ ಖುಷಿಪಟ್ಟಿದ್ದರು. ಅಷ್ಟೊಂದು ಕ್ರೀಡಾ ಮನೋಭಾವನೆಯನ್ನು ಮಹಮ್ಮದ್ ಸೀರಾಜ್ ವ್ಯಕ್ತಪಡಿಸಿದ್ದರು. ಸಹ ಆಟಗಾರನ ಸಂಭ್ರಮವನ್ನು ಆ ರೀತಿ ಸಂಭ್ರಮಿಸಿದ್ದು ತೀರಾ ವಿರಳ.
ಇಂದು ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣ. ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ. ವಾಷಿಂಗ್ಟನ್ ಸುಂದರ್ ಅಜೇಯ 96 ರನ್‍ಗಳೊಂದಿಗೆ ಶತಕದ ಸಂಭ್ರಮಕ್ಕಾಗಿ ಕಾಯುತ್ತಿದ್ದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಅಕ್ಸರ್ ಪಟೇಲ್ 43 ರನ್ ಗಳಿಸಿ ರನೌಟಾದ್ರು. ಇನ್ನು ಇಶಾಂತ್ ಶರ್ಮಾ ಹಾಗೇ ಬಂದು ಹೋದ್ರು.
ಕೊನೆಯವರಾಗಿ ಬಂದಿದ್ದು ಮಹಮ್ಮದ್ ಸೀರಾಜ್. ಆಗ ಒಂದು ಕ್ಷಣ ಚೆನ್ನೈ ಎರಡನೇ ಟೆಸ್ಟ್ ಪಂದ್ಯ ನೆನಪಾಗುತ್ತಿತ್ತು. ಅಶ್ವಿನ್ ಶತಕ ದಾಖಲಿಸುತ್ತಿದ್ದಂತೆ ಸಂಭ್ರಮ ಪಟ್ಟಿದ್ದ ಸೀರಾಜ್ ವಾಷಿಂಗ್ಟನ್ ಸುಂದರ್ ಶತಕವನ್ನು ಸಂಭ್ರಮಿಸುತ್ತಾರೆ ಅಂತ ಅನ್ನಿಸುತ್ತಿತ್ತು.
ಆದ್ರೆ ಸೀರಾಜ್ ಲೆಕ್ಕಚಾರ ಎಲ್ಲಾ ಉಲ್ಟಾಪಲ್ಟಾ ಆಯ್ತು . ಸ್ಟೋಕ್ಸ್ ವೇಗದ ಎಸೆತಕ್ಕೆ ಮಹಮ್ಮದ್ ಸೀರಾಜ್ ಕ್ಲೀನ್ ಬೌಲ್ಡಾದ್ರು, ವಾಷಿಂಗ್ಟನ್ ಸುಂದರ್ ಸುಂದರ ದಾಖಲಿಸಿಲ್ಲ. ಮಹಮ್ಮದ್ ಸೀರಾಜ್ ಸಂಭ್ರಮಿಸಲಿಲ್ಲ. ಇಬ್ಬರು ನಿರಾಸೆಯಿಂದಲೇ ಪೆವಿಲಿಯನ್‍ಗೆ ಹಿಂತಿರುಗಿದ್ರು.
ಆದ್ರೆ ಪಂದ್ಯ ಮುಗಿದ ನಂತರ ಇಬ್ಬರ ಮುಖದಲ್ಲೂ ಮಂದಹಾಸವಿತ್ತು. ಕಾರಣಗಳು ಗೆಲುವು, ಸರಣಿ ಗೆಲುವು, ಅದಕ್ಕಿಂತ ಹೆಚ್ಚಾಗಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್‍ನ ಫೈನಲ್ ಗೆ ಎಂಟ್ರಿಯಾಗಿರೋದು, ಅದೇನೇ ಇದ್ರೂ ಮನದಲ್ಲಿ ಮಾತ್ರ ಈ ನೋವು, ನಿರಾಸೆಯಂತೂ ಇದ್ದೇ ಇರುತ್ತೆ.
washington sundar mohammad siraj team india saakshatvಶತಕ ದಾಖಲಿಸಲು ಆಗಲಿಲ್ಲ ಎಂಬ ಬೇಸರ ವಾಷಿಂಗ್ಟನ್ ಸುಂದರ್ ಅವರದ್ದಾದ್ರೆ, ನನ್ನಿಂದಾಗಿ ಸುಂದರ್ ಶತಕ ಮಿಸ್ ಆಯ್ತಲ್ಲ ಅನ್ನೋ ನೋವು ಮಹಮ್ಮದ್ ಸೀರಾಜ್ ಅವರನ್ನು ಕಾಡದೇ ಬಿಡುವುದಿಲ್ಲ.
ಅಂದ ಹಾಗೇ ಟೀಮ್ ಇಂಡಿಯಾ ಈ ಸರಣಿಯಿಂದ ಹಲವು ಪಾಠಗಳನ್ನು ಕಲಿತಿದೆ. ಹಾಗೇ ಮೂರು ನಾಲ್ಕು ಆಲ್ ರೌಂಡರ್ ಗಳ ಉದಯವಾಗಿದೆ. ತಂಡದ ಕ್ರೀಡಾ ಸ್ಫೂರ್ತಿ, ಆತ್ಮವಿಶ್ವಾಸವಂತೂ ಇಮ್ಮಡಿಗೊಂಡಿದೆ.
ಈ ನಡುವೆ ಪಂದ್ಯದ ಬಳಿಕ ವಾಷಿಂಗ್ಟನ್ ಸುಂದರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಶತಕ ದಾಖಲಿಸಲು ಆಗಲಿಲ್ಲ ಎಂಬ ಬೇಸರ ನನಗಿಲ್ಲ. ತಂಡದ ಗೆದ್ದಿರುವುದು ತುಂಬಾನೇ ಖುಷಿ ಕೊಟ್ಟಿದೆ. ಶತಕ ಬಂದೇ ಬರುತ್ತೆ. ಅದಕ್ಕೂ ಕಾಯಬೇಕು. ಸರಿಯಾದ ಸಮಯದಲ್ಲಿ ಶತಕ ದಾಖಲಿಸುತ್ತೇನೆ. ಹೀಗೆ ಆತ್ಮವಿಶ್ವಾಸದಿಂದಲೇ ಹೇಳಿಕೊಂಡಿದ್ದಾರೆ ವಾಷಿಂಗ್ಟನ್ ಸುಂದರ್.
ಮೂರು ಟೆಸ್ಟ್ ಪಂದ್ಯಗಳನ್ನು ಆಡಿರುವ ವಾಷಿಂಗ್ಟನ್ ಸುಂದರ್ 181 ರನ್ ಹಾಗೂ ಎರಡು ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
21ರ ಹರೆಯದ ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಅವರು ಆಸ್ಟ್ರೇಲಿಯಾ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟಿದ್ದರು ಗಬ್ಬಾದಲ್ಲಿ ನಡೆದಿದ್ದ ಟೆಸ್ಟ್ ಪಂದುದಲ್ಲಿ 82 ರನ್ ಹಾಗೂ ನಾಲ್ಕು ವಿಕೆಟ್ ಪಡೆದು ಭಾರತ 2-1ರಿಂದ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಪಿಚ್ ಬಗ್ಗೆ ಮಾತನಾಡಿದ ವಾಷಿಂಗ್ಟನ್ ಸುಂದರ್, ಬ್ಯಾಟಿಂಗ್ ಗೆ ಪೂರಕವಾಗಿತ್ತು. ಜೇಮ್ಸ್ ಆಂಡರ್ಸನ್ ಮತ್ತು ಸ್ಟೋಕ್ಸ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಈ ಪಿಚ್ ಬ್ಯಾಟಿಂಗ್ ಗೆ ನೆರವಾಗುತ್ತಿತ್ತು ಆದ್ರೆ ರನ್ ಗಳಿಸುವ ತಾಳ್ಮೆ ಮತ್ತು ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ,
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಲಾಡ್ಸ್ ನಲ್ಲಿ ಜೂನ್ 18ರಿಂದ 22ರವರೆಗೆ ಫೈನಲ್ ಟೆಸ್ಟ್ ಪಂದ್ಯ ನಡೆಯಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd