ಮಡಿಕೇರಿ: ಹೆಸರಾಂತ ಹಾಕಿ ಆಟಗಾರ ಬಿ.ಪಿ. ಕೃಷ್ಣ (68) ನಿಧನರಾಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ವಿಶ್ವೇಶ್ವರ ರಸ್ತೆ ನಿವಾಸದಲ್ಲಿ ನಿಧನರಾದ ಕೃಷ್ಣ, ಪತ್ನಿ, ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಹಾಕಿ ಕ್ರೀಡೆಯಲ್ಲಿ ಮುನ್ನಡೆ ಆಟಗಾರರಾಗಿ ಛಾಪು ಮೂಡಿಸಿದ್ದ ಬಿ.ಪಿ ಕೃಷ್ಣ, ರಾಜ್ಯ ಹಾಕಿ ತಂಡವನ್ನು ಪ್ರತಿನಿದಿಸಿದ್ದರು. 6-7 ಭಾರಿ ಭಾರತ ಹಾಕಿ ತಂಡದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದರೂ ಸಹ ತಂಡದಲ್ಲಿ ಸ್ಥಾನ ಗಳಿಸುವಲ್ಲಿ ವಂಚಿತರಾಗಿದ್ದರು.
ಕೃಷ್ಣ ಅವರು ಅಂತಾರಾಷ್ಟ್ರೀಯ ಹಾಕಿ ಆಟಗಾರ, ಭಾರತ ತಂಡದ ಮಾಜಿ ನಾಯಕ ಬಿ.ಪಿ. ಗೋವಿಂದ್ ಅವರ ಸಹೋದರ. ಐಓಬಿ ಬ್ಯಾಂಕ್ ಉದ್ಯೋಗಿಯಾಗಿದ್ದ ಕೃಷ್ಣ, ರಾಜು ಎಂದೇ ಚಿರಪರಿಚಿತರಾಗಿದ್ರು.
ಮೃತರ ಅಂತ್ಯಕ್ರಿಯೆ ಇಂದು(ಮAಗಳವಾರ) ಸಂಜೆ ಸೋಮವಾರಪೇಟೆ ಸಮೀಪದ ಕರ್ಕಳ್ಳಿಯಲ್ಲಿರುವ ಕುರುಹಿನ ಶೆಟ್ಟಿ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದವರು ಹೇಳಿದ್ದಾರೆ.
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ – CM ಡಿ.ಕೆ. ಶಿವಕುಮಾರ್
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ - CM ಡಿ.ಕೆ. ಶಿವಕುಮಾರ್ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡುತ್ತಿರುವುದರ ಬಗ್ಗೆ ಕೇಳಿದಾಗ, "ಈ...








