Nothing Ear (2) : ನಥಿಂಗ್ 2 ವೈಯರ್ ಲೆಸ್ ಭಾರತದಲ್ಲಿ ಬಿಡುಗಡೆ ; ಆರಂಭಿಕ ಬೆಲೆ 10 ಸಾವಿರ….
ನಂಥಿಂಗ್ ತಂತ್ರಜ್ಞಾನ ಕಂಪನಿ ನೂತನವಾಗಿ ನಥಿಂಗ್ ಇಯರ್ (2) ವೈರ್‌ಲೆಸ್ ಇಯರ್‌ಬಡ್ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಇದರ ಬೆಲೆ ರೂ 10,000 ರೂ ನಿಗಧಿಪಡಿಸಲಾಗಿದೆ.
ನಥಿಂಗ್ ಇಯರ್ (2) ನಲ್ಲಿ LHDC 5.0 ಬ್ಲೂಟೂತ್ ಕೊಡೆಕ್ ಸಪೋರ್ಟ್ ಮತ್ತು ಪಾರದರ್ಶಕ ವಿನ್ಯಾಸವನ್ನ ನೀಡಲಾಗಿದೆ. ನಥಿಂಗ್ ಇಯರ್ (1) ಉತ್ತರಾಧಿಕಾರಿಯಾಗಿ ಈ ಮಾಡೆಲ್ ಬಿಡುಗಡೆ ಮಾಡಲಾಗಿದೆ. 11.6 ಎಂಎಂ ವಿನ್ಯಾಸವನ್ನ ಒಳಗೊಂಡಿದ್ದು, ಒಟ್ಟಾರೆ ಧ್ವನಿ ಗುಣಮಟ್ಟಕ್ಕಾಗಿ ಹೊಸ ಡ್ಯುಯಲ್-ಚೇಂಬರ್ ವಿನ್ಯಾಸವನ್ನ ಹೊಂದಿಸಲಾಗಿದೆ. ಅಲ್ಲದೇ ಇದು ಸಹ ಆಕ್ಟಿವ್ ನಾಯ್ಸ್ ಕ್ಯಾನ್ಸಲ್ ಸಪೋರ್ಟ್ ನೊಂದಿಗೆ ಬರುತ್ತಿದೆ.
ಬಳಕೆದಾರರ ತಮ್ಮದೇ ಆದಂತಹ ಧ್ವನಿ ಪ್ರೋಪೈಲ್ ರಚಿಸಿಕೊಳ್ಳಲು ಈಕ್ವಲೈಜರ್ ಸೆಟ್ಟಿಂಗ್ ಗಳನ್ನ ನೀಡಲಾಗಿದೆ. ಪ್ರತಿ ಇಯರ್‌ಬಡ್‌ನಲ್ಲಿ ಮೂರು ಮೈಕ್ರೊಫೋನ್‌ಗಳನ್ನ ನೀಡಲಾಗಿದೆ.
ಹೊಸ ಇಯರ್ (2) ಇಯರ್‌ಫೋನ್‌ಗಳು ಚಾರ್ಜಿಂಗ್ ಕೇಸ್ ನ ಸಂಪೂರ್ಣ ಚಾರ್ಜ್ ನಂತರ 36 ಗಂಟೆಗಳವರೆಗೆ ಪ್ಲೇಬ್ಯಾಕ್ ಸಪೋರ್ಟ್ ಅನ್ನ ನೀಡಲಿವೆ. 10 ನಿಮಿಷಗಳ ಫಾಸ್ಟ್ ಚಾರ್ಜಿಂಗ್ ನಲ್ಲಿ 8 ಗಂಟೆಗಳ ವರೆಗೆ ಬ್ಯಾಟರಿ ಸಪೋರ್ಟ್ ನೀಡಲಿದೆ. ಇಯರ್ (2) 2.5W ವರೆಗೆ ವೈರ್‌ಲೆಸ್ ಚಾರ್ಜಿಂಗ್ ಸಹ ಬೆಂಬಲಿಸುತ್ತದೆ.
ನಥಿಂಗ್ ಇಯರ್ (2) ಭಾರತದಲ್ಲಿ ರೂ 9,999 ರ ಆರಂಭಿಕ ಬೆಲೆಯೊಂದಿಗೆ ಲಭ್ಯವಿದ್ದು, ಖರೀದಿಸುವ ಆಸಕ್ತಿ ಇದ್ದವರು ಫ್ಲಿಪ್‌ಕಾರ್ಟ್, ಮೈಂತ್ರಾ ವೆಬ್ ಸೈಟ್ ಅಥವಾ ಮಾರ್ಚ್ 28 ರಿಂದ ಆಫ್ಲೈನ್ ಸ್ಟೋರ್ ಗಳಲ್ಲಿ ಪರಿಶೀಲಿಸಬಹುದು.
Nothing Ear (2): Nothing 2 Wireless Earbud Launched in India; Starting price is 10 thousand….