ಸತತ ನಾಲ್ಕನೇ ಭಾರಿ ವಿಂಬಲ್ಡನ್ ಮುಡಿಗೇರಿಸಿಕೊಂಡ ನೊವಾಕ್ ಜೊಕೊವಿಕ್
ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಕ್ 21 ನೇ ಭಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಭಾನುವಾರ ನಡೆದ ವಿಂಬಲ್ಡನ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಅವರನ್ನು 4-6, 6-3, 6-4, 7-6 ಸೆಟ್‌ಗಳಿಂದ ಸೋಲಿಸಿ ನೊವಾಕ್ ಜಯ ಸಾಧಿಸಿದ್ದಾರೆ.
ಜೊಕೊವಿಕ್ ಈಗ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನ ಗೆದ್ದ ದಾಖಲೆಯ ಪಟ್ಟಿಯಲ್ಲಿ ರಾಫೆಲ್ ನಡಾಲ್‌ಗಿಂತ ಕೇವಲ 1 ಹೆಜ್ಜೆ ಹಿಂದಿದ್ದಾರೆ. ನಡಾಲ್ 22 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿದ್ದು, 20 ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ವಿಂಬಲ್ಡನ್ ಫೈನಲ್‌ನಲ್ಲಿ ಜೊಕೊವಿಕ್‌ಗೆ ಆರಂಭದಲ್ಲಿ ಎಡವಿದ್ದರು. ಕಿರ್ಗಿಯೋಸ್ ಮೊದಲ ಸೆಟ್ ನ್ನ 6-4 ರಿಂದ ಗೆದ್ದುಕೊಂಡಿದ್ದರು. ನಂತರದ ಎರಡು ಸೆಟ್‌ಗಳಲ್ಲಿ ಸರ್ಬಿಯಾದ ಆಟಗಾರ ತಿರುಗೇಟು ನೀಡಿ ಮೇಲುಗೈ ಸಾಧಿಸಿದರು. ನಾಲ್ಕನೇ ಸೆಟ್ 6-6 ರಲ್ಲಿ ಸಮಬಲಗೊಂಡಿತ್ತು. ನಂತರದ ಟೈಬ್ರೇಕರ್ ನ್ನ ಗೆಲ್ಲುವ ಮೂಲಕ ಜೊಕೊವಿಕ್ ಸತತ ನಾಲ್ಕನೇ ಮತ್ತು ಒಟ್ಟಾರೆ ಏಳನೇ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Novak Djokovic won his fourth Wimbledon title in a row








