NTR 30 : ತಾರಕ್ ಅಭಿನಯದ ಹೊಸ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ…
ಯಂಗ್ ಟೈಗರ್ ಎನ್ಟಿಆರ್ ರಾಮ್ ಚರಣ್ ಜೊತೆ ನಟಿಸಿದ RRR ಚಿತ್ರದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. RRR ನಂತರ ಮುಂದಿನ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. NTR ಈಗಾಗಲೇ ಕೊರಟಾಲ ಶಿವ ಮತ್ತು ಪ್ರಶಾಂತ್ ನೀಲ್ ಕಾಂಬೀನೇಷನ್ ನಲ್ಲಿ ಎರಡು ಚಿತ್ರಗಳನ್ನ ಘೋಷಿಸಿದ್ದಾರೆ. ಆದರೇ ಇದುವರೆಗೂ ಈ ಎರಡು ಚಿತ್ರಗಳಿಂದ ಅಪ್ಡೇಟ್ ಗಳು ಹೊರಬಂದಿರಲಿಲ್ಲ.
ಆರ್ಆರ್ಆರ್ ಸಿನಿಮಾ ನಂತರ 9 ತಿಂಗಳು ಕಳೆದರೂ ಸಿನಿಮಾ ಶೂಟಿಂಗ್ ಆರಂಭವಾಗಿರಲಿಲ್ಲ ಮತ್ತು ಯಾವುದೇ ಅಪ್ಡೇಟ್ ಹೊರಬಂದಿರಲಿಲ್ಲ. ಇದರಿಂದ ಎನ್ ಟಿ ಆರ್ ಅಭಿಮಾನಿಗಳು ತೀವ್ರ ನಿರಾಸೆ ವ್ಯಕ್ತಪಡಿಸಿದ್ದರು. ಇದೀಗ ಹೊಸ ವರ್ಷದ ಪ್ರಯುಕ್ತ ಕೊರಟಾಲ ಶಿವ ನಿರ್ದೇಶನದ ಎನ್ ಟಿ ಆರ್ 30 ಚಿತ್ರದ ಅಪ್ಡೇಟ್ ಉಡುಗೊರೆ ರೂಪದಲ್ಲಿ ಬಿಡುಗಡೆಯಾಗಿದೆ. ಚಿತ್ರದ ಶೂಟಿಂಗ್ ಶುರವಾಗುವ ಮತ್ತು ಚಿತ್ರ ಬಿಡುಗಡೆಯಾಗುವ ದಿನಾಂಕವನ್ನ ಒಂದೇ ಬಾರಿಗೆ ಪ್ರಕಟಿಸಲಾಗಿದೆ.
ಎನ್ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಶಿವ ನಿರ್ದೇಶನದ ಎನ್ಟಿಆರ್ 30 ಚಿತ್ರದ ಶೂಟಿಂಗ್ ಫೆಬ್ರವರಿಯಲ್ಲಿ ಶುರುವಾಗಲಿದೆ ಮತ್ತು ಚಿತ್ರದ ಬಿಡುಗಡೆ ಏಪ್ರಿಲ್ 5, 2024 ರಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ.
ಎನ್.ಟಿ.ಆರ್ 30 ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದಕ್ಕೆ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.ಆದರೆ ಚಿತ್ರ ತಡವಾಗಿ ಬಿಡುಗೆಡೆಯಾಗುತ್ತಿರುವುದಕ್ಕೆ ನಿರಾಸೆ ಅನುಭವಿಸುತ್ತಿದ್ದಾರೆ. NTR ತೆರೆಮೇಲೆ ಕಾಣಿಸಿಕೊಂಡು ಈಗಾಗಲೇ 9 ತಿಂಗಳು ಕಳೆದಿದ್ದು ಈಗ ಇನ್ನೂ 15 ತಿಂಗಳು ಕಾಯಬೇಕಿದೆ.
NTR 30 : Tarak Starrer Release Date Announced…