ಕೋವಿಡ್ ಲಸಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ನಕಲಿ ನರ್ಸ್ ಮಾಡಿದ್ದೇನ್ ನೋಡಿ..!
ಹೈದರಾಬಾದ್ : ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ ವೇಗವಾಗಿ ಸಾಗ್ತಿದ್ದು, ಮನೆ ಮನೆಗೆ ತೆರಳಿ ಲಸಿಕೆ ನೀಡುವ ಅಭಿಯಾನವೂ ಸಾಗ್ತಿದೆ. ಆದ್ರೆ ಲಸಿಕೆ ನೀಡುವುದನ್ನೇ ಕೆಲ ಖದೀಮರು ಇದೀಗ ನೆಪ ಮಾಡಿಕೊಂಡು ಹೊಸ ರೀತಿಯಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕ್ತಿದ್ದಾರೆ. ಹೌದು ಹೈದ್ರಾಬಾದ್ ನ ಮೀರ್ ಪೇಟೆಯ ಲಲಿತಾ ನಗರದಲ್ಲಿ ಮಹಿಳೆಯೊಬ್ಬಳು ತನ್ನನ್ನ ತಾನು ನರ್ಸಿಂಗ್ ವಿದ್ಯಾರ್ಥಿನಿ ಎಂದು ಹೇಳಿಕೊಂಡು ವೃದ್ಧ ದಂಪತಿಗೆ ನಕಲಿ ಲಸಿಕೆಯನ್ನು ಚುಚ್ಚಿ ಅವರ ಆಭರಣವನ್ನು ದೋಚಿ ಎಸ್ಕೇಪ್ ಆಗಿದ್ದಾಳೆ.
ವೃದ್ಧ ದಂಪತಿಗಳ ಮನೆಗೆ ಬಂದ ಆರೋಪಿ ಮಹಿಳೆ ಕೊರೊನಾ ಚುಚ್ಚುಮದ್ದು ಎಂದು ಹೇಳಿ ದಂಪತಿಗೆ ಮತ್ತು ಬರುವ ಲಸಿಕೆ ನೀಡಿ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾಳೆ. ಎಚ್ಚರಗೊಂಡ ದಂಪತಿಗೆ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.