NZ vs ENG: ಜಯದ ಹೊಸ್ತಿಲಲ್ಲಿ ಮುಗ್ಗರಿಸಿದ ಇಂಗ್ಲೆಂಡ್: ಕಿವೀಸ್ಗೆ 1 ರನ್ಗಳ ರೋಚಕ ಜಯ
ಅನುಭವಿ ಆಟಗಾರ ಜೋ ರೂಟ್(95) ಜವಾಬ್ದಾರಿಯ ಬ್ಯಾಟಿಂಗ್ ನಡುವೆಯೂ ಸಂಘಟಿತ ಪ್ರದರ್ಶನ ನೀಡಿದ ನ್ಯೂಜಿ಼ಲೆಂಡ್ 2ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ 1 ರನ್ಗಳ ರೋಚಕ ಗೆಲುವು ಸಾಧಿಸಿದೆ.
ವೆಲ್ಲಿಂಗ್ಟನ್ನಲ್ಲಿ ನಡೆದ ಪಂದ್ಯದ 5ನೇ ದಿನದಾಟದಂದು ಕಿವೀಸ್ ನೀಡಿದ 257 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್ಗೆ ಜೋ ರೂಟ್(95) ಆಸರೆಯಾದರು.
ಆದರೆ ಗೆಲುವಿನ ಹೊಸ್ತಿಲಲ್ಲಿ ಎಡವಿದ ಇಂಗ್ಲೆಂಡ್ 256 ರನ್ಗಳಿಗೆ ಆಲೌಟ್ ಆಗುವ ಮೂಲಕ 1 ರನ್ಗಳಿಂದ ಸೋಲು ಕಂಡಿತು. ಈ ಗೆಲುವಿನೊಂದಿಗೆ ನ್ಯೂಜಿ಼ಲೆಂಡ್ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು.
ನಾಲ್ಕನೇ ದಿನದಂತ್ಯಕ್ಕೆ 48/1 ರನ್ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ದಿನದ ಆರಂಭದಲ್ಲೇ ಒಲ್ಲಿ ರಾಬಿನ್ಸನ್(2) ವಿಕೆಟ್ ಕಳೆದುಕೊಂಡಿತು.
ಇವರ ಬೆನ್ನಲ್ಲೇ ಬೆನ್ ಡಾಕ್ಕೆಟ್(33), ಒಲ್ಲಿ ಪಾಪ್(14) ಹಾಗೂ ಹ್ಯಾರಿ ಬ್ರೂಕ್(0) ಸಹ ಪೆವಿಲಿಯನ್ ಸೇರಿದರು. ಪರಿಣಾಮವಾಗಿ ಇಂಗ್ಲೆಂಡ್ 80 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಜೊತೆಯಾದ ಅನುಭವಿ ಜೋ ರೂಟ್(95) ಹಾಗೂ ನಾಯಕ ಬೆನ್ ಸ್ಟೋಕ್ಸ್(33) 6ನೇ ವಿಕೆಟ್ಗೆ 121 ರನ್ಗಳ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ತಂಡದ ಮೊತ್ತ 201 ರನ್ಗಳಿದ್ದಾಗ ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ವಿಕೆಟ್ಗಳನ್ನ ಕಳೆದುಕೊಂಡ ಇಂಗ್ಲೆಂಡ್ ಮತ್ತೆ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಕಮ್ ಬ್ಯಾಕ್ ಮಾಡಿದ ನ್ಯೂಜಿ಼ಲೆಂಡ್ ನಿರ್ಣಾಯಕ ಹಂತದಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ಗಳನ್ನ ಪಡೆಯುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಬೆನ್ ಫೋಕ್ಸ್(35) ಜವಾಬ್ದಾರಿಯುತ ಆಟದ ನಡುವೆಯೂ ನೆಲ್ ವ್ಯಾಗ್ನರ್(62/4) ದಾಳಿಗೆ ಸಿಲುಕಿದ ಇಂಗ್ಲೆಂಡ್ 1 ರನ್ಗಳ ಸೋಲನುಭಿಸುವ ಮೂಲಕ ಆಘಾತ ಕಂಡಿತು. ಅತಿಥೇಯ ನ್ಯೂಜಿ಼ಲೆಂಡ್ ಪರ ವ್ಯಾಗ್ನರ್ 4 ವಿಕೆಟ್ ಪಡೆದು ಮಿಂಚಿದರೆ. ನಾಯಕ ಟಿಮ್ ಸೌಥಿ 3 ಹಾಗೂ ಮ್ಯಾಟ್ ಹೆನ್ರಿ 2 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಉಭಯ ತಂಡಗಳ 3 ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿತು. ಸರಣಿಯ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದರೆ, 2ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಗೆಲುವು ಕಂಡಿತ್ತು. 3ನೇ ಪಂದ್ಯದಲ್ಲಿ ನ್ಯೂಜಿ಼ಲೆಂಡ್ 1 ರನ್ಗಳಿಂದ ಗೆದ್ದು ಸರಣಿ ಸಮಬಲ ಸಾಧಿಸಿತು. 3ನೇ ಟೆಸ್ಟ್ನಲ್ಲಿ ಅದ್ಭುತ ಬ್ಯಾಟಿಂಗ್ನಿಂದ ತಂಡಕ್ಕೆ ಆಸರೆಯಾದ ಕೇನ್ ವಿಲಿಯಂಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ. ಇಂಗ್ಲೆಂಡ್ನ ಹ್ಯಾರಿ ಬ್ರೂಕ್ಸ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.