NZ vs SL : ಮ್ಯಾಥ್ಯೂವ್ಸ್ ಭರ್ಜರಿ ಶತಕ: ಕುತೂಹಲ ಘಟ್ಟದಲ್ಲಿ ಲಂಕಾ v ಕಿವೀಸ್ ಪ್ರಥಮ ಟೆಸ್ಟ್
ಏಂಜೆಲೋ ಮ್ಯಾಥ್ಯೂವ್ಸ್(115) ಭರ್ಜರಿ ಶತಕದ ನೆರವಿನಿಂದ ಕಿವೀಸ್ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ ಶ್ರೀಲಂಕಾ ಮೇಲುಗೈ ಸಾಧಿಸಿದ್ದು, ಎರಡು ತಂಡಗಳ ನಡುವಿನ ಅಂತಿಮ ದಿನದಾಟ ಕುತೂಹಲ ಮೂಡಿಸಿದೆ.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.
ಪರಿಣಾಮ ಎರಡನೇ ಇನ್ನಿಂಗ್ಸ್‌ನಲ್ಲಿ 302 ರನ್‌ಗಳಿಸಿತು. ಆ ಮೂಲಕ ನ್ಯೂಜಿ಼ಲೆಂಡ್ ತಂಡಕ್ಕೆ 286 ರನ್‌ಗಳ ಟಾರ್ಗೆಟ್ ನೀಡಿದೆ. ಈ ಗುರಿ ಬೆನ್ನಟ್ಟಿರುವ ಕಿವೀಸ್ ಪಡೆ 4ನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 28 ರನ್‌ಗಳಿಸಿದ್ದು, ಲೇಥಂ(11*) ಹಾಗೂ ವಿಲಿಯಂಸನ್(7*) ಕ್ರೀಸ್‌ನಲ್ಲಿದ್ದಾರೆ.
ನಾಲ್ಕನೇ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್ ಮುಂದುವರಿಸಿದ ಲಂಕಾ ತಂಡಕ್ಕೆ ಬ್ಯಾಟ್ಸ್‌ಮನ್‌ಗಳು ಆಸರೆಯಾದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಏಂಜೆಲೋ ಮ್ಯಾಥ್ಯೂವ್ಸ್(235 ಬಾಲ್, 11 ಬೌಂಡರಿ, 115 ರನ್) ಭರ್ಜರಿ ಶತಕ ಬಾರಿಸಿ ಮಿಂಚಿದರೆ.
ಇವರಿಗೆ ಸಾಥ್ ನೀಡಿದ ಚಂದಿಮಲ್(42) ಹಾಗೂ ಧನಂಜನಯ ಡಿಸಿಲ್ವಾ(47*) ರನ್‌ಗಳಿಸಿ ತಂಡದ ಮೊತ್ತವನ್ನ 300ರ ಗಡಿದಾಟಿಸಿದರು.
ಆದರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬಾರದ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡದ 2ನೇ ಇನ್ನಿಂಗ್ಸ್ 302ಕ್ಕೆ ಅಂತ್ಯಗೊಂಡಿತು. ಕಿವೀಸ್ ಪರ ಟಿಕ್ನರ್ 4 ವಿಕೆಟ್ ಪಡೆದು ಮಿಂಚಿದರೆ, ಹೆನ್ರಿ 3 ಹಾಗೂ ಸೌಥಿ 2 ವಿಕೆಟ್ ಪಡೆದರು.
ಶ್ರೀಲಂಕಾ ನೀಡಿದ 285 ರನ್‌ಗಳ ಸವಾಲು ಬೆನ್ನತ್ತಿದ ನ್ಯೂಜಿ಼ಲೆಂಡ್‌ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಲೇಥಂ ಹಾಗೂ ಕಾನ್ವೆ ಜೋಡಿ ಕೇವಲ 9 ರನ್‌ಗಳಿಗೆ ಬೇರ್ಪಟ್ಟಿತು.
ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ಡೆವೊನ್ ಕಾನ್ವೆ(5) ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಯಾದ ಟಾಮ್ ಲೇಥಂ(11*) ಹಾಗೂ ವಿಲಿಯಂಸನ್(7*) 2ನೇ ವಿಕೆಟ್‌ಗೆ 19 ರನ್‌ಗಳ ಜೊತೆಯಾಟದೊಂದಿಗೆ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
NZ vs SL: Mathews’s mammoth century: Lanka vs Kiwis first Test in suspense