ODI Cricket : ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್ ಮನ್ ಕೊಹ್ಲಿ
ಪ್ರಸಕ್ತ ವರ್ಷಾರಂಭದಲ್ಲೇ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಪ್ರವಾಸಿ ಶ್ರೀಲಂಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಬಾರಿಸುವ ಮೂಲಕ ODI ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿರುವ ಟಾಪ್-5 ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರ್ಪಡೆಗೊಂದಿದ್ದಾರೆ.
ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಕಿಂಗ್ ಕೊಹ್ಲಿ, ತಮ್ಮ ODI ಕ್ರಿಕೆಟ್ ಬದುಕಿನ 46ನೇ ಶತಕ ಸಿಡಿಸಿ ಮಿಂಚಿದರು. ಅಜೇಯ 166(110) ರನ್‌ಗಳಿಸಿದ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೊಹ್ಲಿಯ ಈ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡಿತ್ತು.
ಈ ಪ್ರದರ್ಶನದೊಂದಿಗೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸಿದ ವಿಶ್ವದ ಟಾಪ್-5 ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿದರು. ಆ ಮೂಲಕ ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ಮಹೆಲಾ ಜಯವರ್ಧನೆ ಅವರನ್ನ ಹಿಂದಿಕ್ಕಿದರು. ಸದ್ಯ ವಿರಾಟ್ ಕೊಹ್ಲಿ 268 ODI ಪಂದ್ಯಗಳಿಂದ 58.24ರ ಸರಾಸರಿಯೊಂದಿಗೆ 12754 ರನ್‌ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.
ODIನಲ್ಲಿ ಅತ್ಯಧಿಕ ರನ್‌ಗಳಿಸಿದವರು:
18426 – ಸಚಿನ್ ತೆಂಡುಲ್ಕರ್
14234 – ಕುಮಾರ ಸಂಗಕ್ಕಾರ
13704 – ರಿಕಿ ಪಾಂಟಿಗ್
13430 – ಸನತ್ ಜಯಸೂರ್ಯ
12653 – ವಿರಾಟ್ ಕೊಹ್ಲಿ*
12650 – ಮಹೆಲಾ ಜಯವರ್ಧನೆ
ODI Cricket : Kohli is the batsman who has scored the most runs