ಲಾಡ್ಜ್ ನಲ್ಲಿ ಗೆಳೆಯನೊಂದಿಗೆ ದೈಹಿಕ ಸಂಪರ್ಕದ ವೇಳೆ ವಿದ್ಯಾರ್ಥಿನಿ ಸಾವು : ಆಮೇಲೆ ಆಗಿದ್ದೇನು..!
ಭುವನೇಶ್ವರ್: ಲಾಡ್ಜ್ ನಲ್ಲಿ ಬಾಯ್ ಫ್ರೆಂಡ್ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಯುವತಿಯೊಬ್ಬಳು ಪ್ರಜ್ಞಾಹೀನ ಸ್ಥಿತಿ ತಲುಪಿದ್ದಳು. ಬಳಿಕ ಆಕೆ ಮೃತಪಟ್ಟಿದ್ದಾಗಿ ತಿಳಿಯುತ್ತಿದ್ದಂತೆ ಆಕೆಯ ಬಾಯ್ ಫ್ರೆಂಡ್ ತನ್ನ ಸ್ನೇಹಿತ ಸಹಾಯದಿಂದ ಆಕೆಯ ಮೃತದೇಹವನ್ನ ಸ್ಕೂಟರ್ ನಲ್ಲಿ ಕೊಂಡೊಯ್ದು ರಸ್ತೆಬದಿ ಬಿಸಾಡಿರುವ ಘಟನೆ ಒಡಿಶಾದ ಬಾಬ್ ಪುರ್ ಜಿಲ್ಲೆಯಲ್ಲಿ ನಡೆದಿದೆ.
ಪರೋಕ್ಷವಾಗಿಯೂ ʼಅತ್ಯಾಚಾರ ಸಂತ್ರಸ್ತೆʼಯ ಗುರುತು ಬಹಿರಂಗ ಪಡಿಸಬಾರದು: ಮಾಧ್ಯಮಗಳಿಗೆ ನ್ಯಾಯಾಲಯದ ಖಡಕ್ ಸೂಚನೆ..!
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಕೌಕಿಯಾ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಯೂರ್ ಗಂಜ್ ಜಿಲ್ಲೆಯ ಯುವತಿ ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಯುವತಿ ಹಾಗೂ ಆಕೆಯ ಪ್ರಿಯಕರ ರಾಕೇಶ್ ಹೋಟೆಲ್ ನಲ್ಲಿ ತಂಗಿದ್ದರು. ದೈಹಿಕ ಸಂಪರ್ಕದ ನಂತರದಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ನಂತರದಲ್ಲಿ ಆಕೆ ಮೃತಪಟ್ಟಿರುವುದು ಗೊತ್ತಾಗಿತ್ತು. ಸ್ನೇಹಿತನಿಗೆ ಕರೆ ಮಾಡಿ ಮಾಹಿತಿ ನೀಡಿದ್ದು ಆತನೊಂದಿಗೆ ಸ್ಕೂಟರ್ ನಲ್ಲಿ ಮೃತದೇಹ ತೆಗೆದುಕೊಂಡು ದಾರಿಮಧ್ಯೆ ಎಸೆದು ಪರಾರಿಯಾಗಿದ್ದಾಗಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದವನನ್ನ ನಂಬಿ ಹೋದ ಅಪ್ರಾಪ್ತೆಗೆ ಎಂಥಾ ಗತಿ ಆಯ್ತು ನೋಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel