ಮತ್ತೆ ತೈಲ ಬೆಲೆ ಏರಿಕೆ : ಪೆಟ್ರೋಲ್ Petrol ಸೆಂಚುರಿ ನಾಟೌಟ್
ಬೆಂಗಳೂರು : ದೇಶದಲ್ಲಿ ಮತ್ತೆ ತೈಲ ಬೆಲೆ ಏರಿಕೆಯಾಗಿದೆ. ಇಂದು ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 26 ಪೈಸೆ ಮತ್ತು ಡೀಸೆಲ್ ದರ 7 ಪೈಸೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತೈಲ ದರ ಗಗನಕ್ಕೇರಿದ್ದು, ಲೀಟರ್ ಪೆಟ್ರೋಲ್ ಸಾರ್ವಕಾಲಿಕ ದಾಖಲೆ ಬರೆದಿದೆ.
ಇಂದು ನಗರದಲ್ಲಿ ಪೆಟ್ರೋಲ್ ದರ ರೂ.101.09ಕ್ಕೆ ಹಾಗೂ ಡೀಸೆಲ್ ದರ ರೂ.93.67ಕ್ಕೆ ಏರಿಕೆಯಾಗಿದೆ.
ಇದರಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 97.82ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 88.36 ರೂ ಗೆ ಏರಿಕೆಯಾಗಿದೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 103.94ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 95.85 ರೂ ಗೆ ಏರಿಕೆಯಾಗಿದೆ.