Okhi 90 | ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಮಾರ್ಚ್ 24ಕ್ಕೆ ಎಲೆಕ್ಟ್ರಿಕ್ ಸ್ಕೂಟರ್ Okhi 90 ರಿಲೀಸ್
ಓಕಿನಾವಾ ಕಂಪನಿಯ ಹೊಸ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್
ಸಂಪೂರ್ಣ ಚಾರ್ಜ್ ಮಾಡಿದ್ರೆ ಸುಮಾರು 150 ಕಿ.ಮೀ ಮೈಲೇಜ್
ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್
ಎಲೆಕ್ಟ್ರಿಕ್ ಸ್ಕೂಟರ್ಗಳಾದ Ola S1, Simple One, Bajaj Chetak, TVS iCube ಗಳಿಗೆ ನೇರ ಪೈಪೋಟಿ ನೀಡಲು ಮಾರುಕಟ್ಟೆಗೆ ಒಕಿನಾವಾ okhi 90 ಎಲೆಕ್ಟ್ರಿಕ್ ಸ್ಕೂಟರ್ ಗುರುವಾರ ಬಿಡುಗಡೆಯಾಗಲಿದೆ.
Okhi 90 ಓಕಿನಾವಾ ಕಂಪನಿಯ ಹೊಸ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಎಂಬುದು ವಿಶೇಷ.
Okhi 90 ಎಲೆಕ್ಟ್ರಿಕ್ ಸ್ಕೂಟರ್ ತನ್ನ ಮೈಲೇಜ್ ಮೂಲಕ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುತ್ತಿದೆ. ಒಕಿನಾವಾ Okhi 90 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ.
ಈ ಸ್ಕೂಟರ್ ಗಂಟೆಗೆ 80 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ಅಲ್ಲದೆ ಈ ಸ್ಕೂಟರ್ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸುಮಾರು 150 ಕಿ.ಮೀ ದೂರದವರೆಗೆ ಮೈಲೇಜ್ ನೀಡುತ್ತದೆ.
ಸ್ಕೂಟರ್ ನಲ್ಲಿ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಅದು ವೇಗ, ರೇಂಜ್, ಬ್ಯಾಟರಿ ಚಾರ್ಜ್ ಮುಂತಾದ ಮಾಹಿತಿಯನ್ನು ತೋರಿಸುತ್ತದೆ.
ಸ್ಕೂಟರ್ ಇ-ಸಿಮ್ ಮತ್ತು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಕನೆಕ್ಟ್ ಕೂಡ ಮಾಡಬಹುದು.
ಹಾಗೆಯೇ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವೆಹಿಕಲ್ ಅಲರ್ಟ್, ಜಿಯೋ-ಫೆನ್ಸಿಂಗ್, ಇ-ಕಾಲ್, ಡಯಾಗ್ನೋಸ್ಟಿಕ್ಸ್, ರೈಡ್ ಬಿಹೇವಿಯರ್ ಅನಾಲಿಸಿಸ್ ಮುಂತಾದ ವೈಶಿಷ್ಟ್ಯಗಳು ಇದರಲ್ಲಿ ಇರಲಿದೆ.
ಇನ್ನು OKHI 90 ಎಲೆಕ್ಟ್ರಿಕ್ ಸ್ಕೂಟರ್ 1.20 ಲಕ್ಷ ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. Okinawa Okhi 90 electric scooter India launch date revealed