ADVERTISEMENT
Sunday, July 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಪ್ರಾಚೀನ ಈಜಿಪ್ಟ್ ನಾಗರೀಕತೆಯ ರಮ್ಯ ಮನೋಹರ ಕಥಾ ಹಂದರ-ಮೃತ್ಯುಂಜಯ

Namratha Rao by Namratha Rao
June 17, 2022
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಪ್ರಾಚೀನ ಈಜಿಪ್ಟ್ ನಾಗರೀಕತೆಯ ರಮ್ಯ ಮನೋಹರ ಕಥಾ ಹಂದರ-ಮೃತ್ಯುಂಜಯ

ಒಸೈರಿಸ್ ದೇವನ ಹೆಂಡತಿ ಐಸಿಸ್ ದೇವಿ.. ಅವರ ವೀರ ಸಂತಾನ ಹೋರಸ್ ದೇವ.. ಓಸೈರಿಸ್ ನ:ನ್ನು ಮೋಸದಿಂದ ಕೊಲ್ಲುವ ಸೆತ್ ಅನ್ನುವ ರಾಕ್ಷಸ ಒಸೈರಿಸ್ ದೇಹವನ್ನು 14 ಹೋಳುಗಳನ್ನಾಗಿ ಕತ್ತರಿಸುತ್ತಾನೆ.. ಆನಂತರ ಒಸೈರಿಸ್ ನ ಅನುಯಾಯಿಗಳು ಅಷ್ಟೂ ಹೋಳುಗಳನ್ನು ಒಟ್ಟುಗೂಡಿಸಿ ಶವವನ್ನು ಶಾಶ್ವತ ಮನೆ(ಗೋರಿ)ಗೆ ಕಳಿಸುತ್ತಾರೆ.. ಕೆಲ ಕಾಲ ಅಜ್ಞಾತದಲ್ಲಿ ಬದುಕುವ ಐಸಿಸ್ ದೇವತೆ ತನ್ನ ಮಗ ಹೋರಸ್ ನನ್ನು ವೀರಾಧಿವೀರನನ್ನಾಗಿಸುತ್ತಾಳೆ.. ಕೊನೆಗೆ ಹೋರಸ್ ಹಾಗೂ ಸೆತ್ ನಡುವಣ ನಡೆಯುವ ನಿರ್ಣಾಯಕ ಕದನದಲ್ಲಿ ತನ್ನ ತಂದೆ ಒಸೈರಿಸ್ ನನ್ನು ಕೊಂದಂತೆ, ಹೋರಸ್ ಸೆತ್ ನನ್ನು 14 ತುಂಡುಗಳನ್ನಾಗಿ ಹೊಡೆದು ಕೊಂದು ಹಾಕುತ್ತಾನೆ.. ವೀರಾಧಿ ವೀರ ಹೋರಸ್ ಗೆ ಉಘೆ ಅನ್ನುತ್ತದೆ ಐಗುಪ್ತ ರಾಷ್ಟ್ರ.. ಅಂದ ಹಾಗೆ ಒಸೈರಿಸ್ ನ ಶಾಶ್ವತ ಮನೆ ಅಥವಾ ಗೋರಿ ಇರುವ ಸ್ಥಳ ಅಬ್ಟು ದ್ವೀಪ..

Related posts

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

July 12, 2026
NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ ಡಿಕೆ ಶಿವಕುಮಾರ್

July 12, 2026

4000 ವರ್ಷಗಳ ಹಿಂದೆ ಐಗುಪ್ತವನ್ನು ಆಳಿದ ಮೊದಲ ಪೆರೋ ಹೆಸರು ರಾ.. ಅವನೇ ಸೂರ್ಯ.. ಐಗುಪ್ತ ರಾಷ್ಟ್ರದ ಪ್ರಮುಖ ದೇವರು ಈ ರಾಅಥವಾ ಸೂರ್ಯ, ಐಗುಪ್ತ ಜನತೆ ಆರಾಧಿಸುವ ಮುಖ್ಯ ಮೂರು ದೇವರುಗಳು ರಾ, ಪ್ ಟಾ, ಅಮನ್.. ಪ್ ಟಾ ದೇವನನ್ನು ಸರ್ವಶಕ್ತ, ಸರ್ವಜನ ಪೂಜಿತ ದೇವರು ಅಂತ ಗುರುತಿಸಿದರೆ, ಅಮನ್ ದೇವ ದೋಣಿಕಾರರ, ಅಂಬಿಗರ, ದಂಡಿನ ಸೈನಿಕರ ಅಚ್ಚುಮೆಚ್ಚಿನ ದೇವ.. ದೋಣಿ ಮುಳುಗದಂತೆ, ಹಾಯಿ ಹರಿದುಹೋಗದಂತೆ, ಮಹಾ ನೀಲ ನದಿಯಲ್ಲಿ ಚಂಡಮಾರುತಗಳು ಬೀಸಿ ನಾವೆ ಉರುಳದಂತೆ ಕಾಪಾಡುವ ಜವಬ್ದಾರಿ ಅಮನ್ ದೇವನದ್ದು..

ಧೂಎಸಿಸ್ ದೇವತೆ ಗರ್ಭ ಧರಿಸಿದ ಮಹಿಳೆಯರ ಆರಧ್ಯ ದೇವಿ.. ಗರ್ಭದಲ್ಲಿರುವ ಕುಡಿಗಳ ರಕ್ಷಣೆ ಮಾಡುವ ಹೊಣೆ ಅವಳದ್ದು.. ಥೂತ್ ದೇವಿ ಐಗುಪ್ತ ಜನರಿಗೆ ಲಿಪಿಸುರುಳಿ ಜ್ಞಾನ ಕಲಿಸಿದ ವಿದ್ಯಾದೇವತೆ.. ಸ್ವರ್ಣ ದೇವತೆ ಹಾಥೋರ್ ಪೆರೋ ವಂಶದಿಂದ ಅಧಿಕೃತವಾಗಿ ಪೂಜಿಸಲ್ಪಡುವ ದೇವತೆ.. ಕೋಡಿರುವ ಹಸುವಿನ ಮುಖವಾಡ ಧರಿಸರುವ ಹಾಥೊರ್ ಐಗುಪ್ತದಲ್ಲಿ ಮಗು ಹುಟ್ಟಿದ ನಂತರ ಬಂದು ಭವಿಷ್ಯವನ್ನು ನಿರ್ಧರಿಸುತ್ತಾಳೆ ಅನ್ನುವುದು ಐಗುಪ್ತದ ನಂಬಿಕೆ.. ತೋಳದ ಮುಖವಾಡ ಇರುವ ಅನೋಬಿಸ್ ದೇವತೆ ಸತ್ತ ವ್ಯೆಕ್ತಿಗಳಿಗೆ ಮುಕ್ತಿ ದೊರಕಿಸುವ ಶಾಶ್ವತ ಮನೆಯ ದೇವ..

ಇವಿಷ್ಟೂ ಪ್ರಾಚೀನ ಐಗುಪ್ತ ಅಂದರೆ ಈಗಿನ ಈಜಿಪ್ಟ್ ನಾಗರೀಕತೆಯಲ್ಲಿ ಜನರಿಗಿದ್ದ ನಂಬಿಕೆಗಳು.. ನೀಲ ನದಿಯ ಅಂದರೆ ನೈಲ್ ನದಿ ಪಾತ್ರದ ನಡುಗಡ್ಡೆಗಳಿಗೆ ಜಿಂಕೆ ಪ್ರಾಂತ್ಯ, ಮೊಸಳೇ ಪ್ರಾಂತ್ಯ, ನೀರಾನೆ ಪ್ರಾಂತ್ಯ, ಠಗರು ಪ್ರಾಂತ್ಯಗಳೆಂಬ ಹೆಸರು.. ಐಗುಪ್ತದ ರಾಜಧಾನಿ ಮೆಂಫಿಸ್.. 4500 ವರ್ಷಗಳ ಹಿಂದೆ ಐಗುಪ್ತ ರಾಷ್ಟ್ರದಲ್ಲಿ ಲಿಪಿಸುರುಳಿ ಕಂಡು ಹಿಡಿಯಲಾಯ್ತು.. ಕೃಷಿ, ಮೀನುಗಾರಿಕೆ, ಪೆರೋ ಆಳ್ವಿಕೆ, ಗುಲಾಮಿ ಪದ್ಧತಿ, ಗಣಿಗಾರಿಕೆ, ಅರಮನೆ ಗುರುಮನೆಗಳ ಆಡಳಿತ, ಗೋರಿ ನಿರ್ಮಾಣ ಕೊನೆಗೆ ದೇವರೂಪ ಪೆರೋಗೆ ಇದಿರಾಗಿ ಬಂಡಾಯವೆದ್ದ ಮೊದಲ ದಲಿತ ಚಳುವಳಿ ಇವೆಲ್ಲದರ ಸಂಪೂರ್ಣ ಹೂರಣೆವೇ ಮೃತ್ಯುಂಜಯ..

ಬಹಳ ಹಿಂದೆ ಓದಿದ್ದ ಅತ್ಯದ್ಭುತ ಕಾದಂಬರಿ ಮೃತ್ಯುಂಜಯ.. ಓದುತ್ತಾ ಹೋದಂತೆ ಓದುಗರನ್ನು ಪೆರೋ ಪೇಪಿಯನ್ನಾಗಿ, ಮಹಾರಾಣಿ ನೆಫರ್ ಟೀಮ್ ಳನ್ನಾಗಿ, ಅಮಾತ್ಯ ಆಮೆರಬ್ ನನ್ನಾಗಿ, ಮಹಾ ಅರ್ಚಕ ಹೆಪಾಟ್ ನನ್ನಾಗಿ, ದಲಿತ ಬಂಡಾಯದ ಮಹಾನ್ ಜನನಾಯಕನಾದ ಮೆನಪ್ ಟಾ ನನ್ನಾಗಿಸುತ್ತದೆ ಕಾದಂಬರಿ.. ಅದಿಷ್ಟೇ ಅಲ್ಲದೆ ಕಾದಂಬರಿಯುದ್ದಕ್ಕೂ ಅರಮನೆ-ಗುರುಮನೆಗಳ ರಾಜಕಾರಣವಿದೆ.. ಮೆನಪ್ ಟಾನ ಸುಮುಧಾಯದ ಸಂಘಟಿತ ಹೋರಾಟವಿದೆ.. ಕುತಂತ್ರಿಗಳಾದ ಸೆನಬ್, ಸಿನ್ಯುಹೆ, ಗೇಬು, ಟಿಹುಟಿ, ಬಕೀಲ, ಪ್ರಾಂತಪಾಲರು, ಭೂಮಾಲಿಕರ ಷಡ್ಯಂತ್ರಗಳಿವೆ.. ಕೊನೆಗೆ ರಾಜಕೀಯದ ಚೌಕಾಮಣೆಯಾಟದಲ್ಲಿ ಬಲಿಯಾಗುವ ಮೆನನಪ್ ಟಾ ವಿಚಾರಣೆ ವೇಳೆ ಮಾತನಾಡುವ ಅದ್ಭುತ ಅಂತರಾಳದ ಮನಕಲಕುವ ಸಂದೇಶವಿದೆ.. ಮೆನ್ನ, ಬಟಾ, ಖ್ನೇಮ್ ಹೊಟೆಪ್, ಸ್ನೋಫ್ರು, ಸುಬೆಕ್ಕು, ಶಿಲ್ಪಿ ನೆಖೆನ್, ಮುಂತಾದ ಅಪಾರ ಮೆದು ಹೃದಯಿ ಪಾತ್ರಗಳು ಮನ ಮುಟ್ಟುತ್ತವೆ.. ಮೆನಪ್ ಟಾ ಪತ್ನಿ ನೆಫಿಸ್, ರಾಮರಿಪ್ ಟಾ, ನೆಜಮುಟ್, ಶೀಬಾ ಮುಂತಾದ ಪಾತ್ರಗಳು ಆರ್ದ್ರವಾಗಿಸುತ್ತವೆ..
ನಿಜ ನಿಜ ಕನ್ನಡಕ್ಕೊಬ್ಬರೇ ನಿರಂಜನ..

-ವಿಭಾ

Tags: #saakshatvmrutyunjayaold egyptspecial article
ShareTweetSendShare
Join us on:

Related Posts

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

by Shwetha
July 12, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಎಂಬ ಹಳೇ ಗಾದೆ ಮಾತು ಮತ್ತೊಮ್ಮೆ ಅಕ್ಷರಶಃ ನಿಜವಾಗಿದೆ. ರಾಜ್ಯ ರಾಜಕಾರಣ ಹಾಗೂ ಪಕ್ಷದ...

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ ಡಿಕೆ ಶಿವಕುಮಾರ್

by Shwetha
July 12, 2026
0

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ಹಳೆ ಪಿಂಚಣಿ ಯೋಜನೆ ಅಂದರೆ ಓಪಿಎಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಮಹತ್ವದ ಹೆಜ್ಜೆ ಇಟ್ಟಿದೆ....

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

by Shwetha
July 12, 2026
0

ಬೆಂಗಳೂರು: ಕಾಂಗ್ರೆಸ್ ನ ಪ್ರಭಾವಿ ನಾಯಕ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಂಕಷ್ಟದ ಕಾರ್ಮೋಡ ಕವಿದಿದೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ...

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

by Shwetha
July 12, 2026
0

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳವನ್ನು ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಈಗ ದೊಡ್ಡ ಮಟ್ಟದ ಸಾಂಸ್ಕೃತಿಕ ಸಂಘರ್ಷಕ್ಕೆ ನಾಂದಿ...

ನನ್ನ ಹತ್ಯೆಗೆ ಸಂಚು ನಡೆಸಿದರೆ ಇರಾನ್ ಭೂಪಟದಿಂದಲೇ ನಾಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನನ್ನ ಹತ್ಯೆಗೆ ಸಂಚು ನಡೆಸಿದರೆ ಇರಾನ್ ಭೂಪಟದಿಂದಲೇ ನಾಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

by Shwetha
July 12, 2026
0

ವಾಷಿಂಗ್ಟನ್: ತನ್ನ ವಿರುದ್ಧ ಹತ್ಯೆ ಅಥವಾ ಹತ್ಯೆಗೆ ಸಣ್ಣ ಪ್ರಯತ್ನ ನಡೆದರೂ ಇರಾನ್ ದೇಶವನ್ನು ಸಂಪೂರ್ಣವಾಗಿ ನಾಶಮಾಡಿ ಧ್ವಂಸಗೊಳಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram