ರಾಮ ಹುಟ್ಟಿದ್ದು ದಕ್ಷಿಣ ನೇಪಾಳದ ಅಯೋಧ್ಯೆಪುರಿಯಲ್ಲಿ ಎಂದಿದ್ದ ಓಲಿ ಚಿತ್ವಾನ್ ಜಿಲ್ಲೆಯ ಮಾದಿ ಪಟ್ಟಣಕ್ಕೆ ಅಯೋಧ್ಯಾಪುರಿ ಎಂದು ಮರುನಾಮಕರಣ ಮಾಡುವಂತೆ ಸೂಚಿಸಿದ್ದಾರೆ.
ಕಠ್ಮಂಡ್, ಅಗಸ್ಟ್ 11: ಇತ್ತೀಚೆಗಷ್ಟೆ ಅದ್ದೂರಿಯಾಗಿ ನಡೆದ ಅಯೋಧ್ಯೆಯಲ್ಲಿನ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಿಂದ ಕರುಬಿದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತೊಮ್ಮೆ ವಿವಾದದ ಕೇಂದ್ರವಾಗಿದ್ದಾರೆ. ಈ ಮೊದಲು ಹಿಂದೂಗಳ ಆರಾಧ್ಯ ದೈವ ಭಗವಾನ್ ಶ್ರೀ ರಾಮನನ್ನು ನೇಪಾಳಿ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ನೇಪಾಳ ಪ್ರಧಾನಿ ಇದೀಗ ನೇಪಾಳದಲ್ಲಿ ಮತ್ತೊಂದು
ರಾಮ ಜನ್ಮ ಭೂಮಿ ನಿರ್ಮಿಸಲು ಮುಂದಾಗಿದ್ದಾರೆ.
ರಾಮ ಹುಟ್ಟಿದ್ದು ದಕ್ಷಿಣ ನೇಪಾಳದ ಅಯೋಧ್ಯೆಪುರಿಯಲ್ಲಿ ಎಂದಿದ್ದ ಓಲಿ ಚಿತ್ವಾನ್ ಜಿಲ್ಲೆಯ ಮಾದಿ ಪಟ್ಟಣಕ್ಕೆ ಅಯೋಧ್ಯಾಪುರಿ ಎಂದು ಮರುನಾಮಕರಣ ಮಾಡುವಂತೆ ಸೂಚಿಸಿದ್ದಾರೆ.
ಚಿತ್ವಾನ್ ಜಿಲ್ಲೆಯ ಮಾದಿ ಪಟ್ಟಣದ ಮೇಯರ್ ಜೊತೆ ಸುದೀರ್ಘ 2 ಗಂಟೆ ಸಭೆ ನಡೆಸಿರುವ ನೇಪಾಳ ಪ್ರಧಾನಿ ಅಯೋಧ್ಯಾಪುರಿಯನ್ನು ರಾಮಜನ್ಮ ಭೂಮಿ ಎಂದು ವ್ಯಾಪಕವಾಗಿ ಪ್ರಚಾರ ಮಾಡುವಂತೆ ಆದೇಶಿಸಿದ್ದಾರೆ. ಅಷ್ಟೇ ಅಲ್ಲ ಆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಮಂದಿರ ನಿರ್ಮಿಸಿ,
ಅಲ್ಲಿ ರಾಮನ ಬೃಹತ್ ವಿಗ್ರಹ ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ನೀಲಿ ನಕ್ಷೆಯನ್ನು ಸಹ ಸಿದ್ಧ ಪಡಿಸುವಂತೆ ಮೇಯರ್‌ಗೆ ಆದೇಶ ನೀಡಿದ್ದಾರೆ.
ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ನೇಪಾಳ ಪ್ರಧಾನಿ ಓಲಿಯ ಈ ನಿರ್ಧಾರಕ್ಕೆ ಅವರದೇ ಪಕ್ಷದ ಮುಖಂಡರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ.








