ಏಳು ವರ್ಷದ ಬಾಲಕನಿಗೆ ಒಮಿಕ್ರಾನ್..! Omicron saaksha tv
ನವದೆಹಲಿ : ದೇಶದಲ್ಲಿ ಕೊರೊನಾ ಹೆಮ್ಮಾರಿಯ ಮಧ್ಯೆ ಮಾಯಾವಿ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ತನ್ನ ಕಬಂದ ಬಾಹುಗಳನ್ನು ಕ್ಷಿಪ್ರಗತಿಯಲ್ಲಿ ಚಾಚುತ್ತಿದೆ. ಭಾರತದಲ್ಲಿ ಒಮಿಕ್ರಾನ್ ಈಗಾಗಲೇ ತನ್ನ ಇರುವಿಕೆಯನ್ನು ಗಟ್ಟಿಯಾಗಿ ಸಾರಿ ಹೇಳಿದ್ದು, ಇದೀಗ ಸಿಕ್ಕ ಸಿಕ್ಕವರ ದೇಹ ಹೊಕ್ಕಲು ಮುಂದಾಗಿದೆ.
ಮೊದಲು ನಮ್ಮ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದ ಮಾಯಾವಿ ಒಮಿಕ್ರಾನ್ ಇದೀಗ ದೀದಿ ನಾಡು ವೆಸ್ಟ್ ಬೆಂಗಾಲ್ ನಲ್ಲಿ ತಲೆ ಎತ್ತಿದೆ. ಅಂದರೇ ಪಶ್ಚಿಮ ಬಂಗಾಳದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಬಂಗಾಲದಲ್ಲಿ ಏಳು ವರ್ಷದ ಬಾಲಕನಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಪಶ್ಚಿಮ ಬಂಗಾಳ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು,”ಹೊಸ ಕೊರೊನಾ ವೈರಸ್ ರೂಪಾಂತರಕ್ಕೆ 7 ವರ್ಷದ ಬಾಲಕ ಪಾಸಿಟಿವ್ ಪರೀಕ್ಷೆ ಮಾಡಿದ್ದಾನೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ವರದಿ ಮಾಡಿದೆ” ಎಂದಿದೆ.
ಈ ನಡುವೆ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಮಾಹಿತಿ ನೀಡಿದೆ.. ಈ ವೈರಸ್ ಹಿಂದಿನ ಎಲ್ಲಾ ತಳಿಗಳಿಗಿಂತಲೂ ಅತಿ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
“ಎಪ್ಪತ್ತೇಳು ದೇಶಗಳಲ್ಲಿ ಈಗ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.. ವಾಸ್ತವವಾಗಿ ಓಮಿಕ್ರಾನ್ ಬಹುಶಃ ಹೆಚ್ಚಿನ ದೇಶಗಳಲ್ಲಿ ಇರಬಹುದು, ಆದ್ರೆ ಪತ್ತೆಯಾಗದೇ ಇರಬಹುದು. ಒಮಿಕ್ರಾನ್ ಅನ್ನು “ಸೌಮ್ಯ” ರೂಪಾಂತರವೆಂದು ದೇಶಗಳು ಪರಿಗಣಿಸುತ್ತಿವೆ ಎಂದು WHO ಚಿಂತಿಸುತ್ತಿದೆ.