ದಾವಣಗೆರೆ: ವಾಹನಗಳಿಗೆ ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್ ತುಂಬಿಸುವಾಗ ಅವಘಡ ನಡೆದಿದ್ದು, ಓಮಿನಿಯೊಂದು ಬಾಂಬ್ ನಂತೆ ಸ್ಫೋಟವಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ದೊಡ್ಡಬೂದಿಹಾಳ್ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಹಲವಾರು ದಿನಗಳಿಂದ ಆಟೋ ಹಾಗೂ ಓಮಿನಿಗಳಿಗೆ ಅನಧಿಕೃತವಾಗಿ ಎಲ್ ಪಿಜಿ ಗ್ಯಾಸ್ ತುಂಬಲಾಗುತ್ತಿತ್ತು. ಆದರೆ, ಇಂದು ಸಿಲಿಂಡರ್ ನಲ್ಲಿ ಲೀಕೇಜ್ ಆಗಿ ಓಮಿನಿ ಕಾರು ಬ್ಲಾಸ್ಟ್ ಆಗಿದೆ.
ಎರಡು ಬಾರಿ ಬಾಂಬ್ ನಂತೆ ಅದು ಬ್ಲಾಸ್ಟ್ ಆಗಿದೆ. ಈ ದೃಶ್ಯ ವೈರಲ್ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಕುರಿತು ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.