ಡಿಸೆಂಬರ್ 31 ಕ್ಕೆ ಕರ್ನಾಟಕ ಬಂದ್ – MES ಸಂಘಟನೆ ನಿಷೇಧಕ್ಕೆ ಆಗ್ರಹ…
ಬೆಳಗಾವಿಯಲ್ಲಿ ಎಂ ಇ ಎಸ್ ಪುಂಡಾಟಕೆಯನ್ನ ಖಂಡಿಸಿ ಮತ್ತು ಎಂ ಇ ಎಸ್ ಸಂಘಟನೆಯನ್ನ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿವೆ. ಹೊಸ ವರ್ಷದ ಹಿಂದಿನ ದಿನವೇ ಕರ್ನಾಟಕ ಬಂದ್ ಗೆ ಸಂಘಟನೆಗಳು ಕರೆ ಕೊಟ್ಟಿವೆ.
ಕನ್ನಡ ನಾಡುನುಡಿಗಾಗಿ ಎಲ್ಲರೂ ಒಂದಾಗಬೇಕು 25 ಕ್ಕೂ ಹೆಚ್ಚು ಸಂಘಟನೆಗಳು ಈ ಕರೆ ಗೆ ಬೆಂಬಲ ಕೊಟ್ಟಿದ್ದು, ಕನ್ನಡಿಗರೆಲ್ಲರು ಒಗ್ಗಟ್ಟಾಗಿ ಹೋರಾಡಬೇಕು. ಕನ್ನಡಿಗರು ನಮಗೆ ಬೆಂಬಲ ನೀಡಬೇಕು ಎಂದು ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಡಿಸೆಂಬರ್ 31 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಅಗತ್ಯ ಸೇವೆಗಳನ್ನ ಹೊರೆತು ಪಡಿಸಿ ಎಲ್ಲವು ಬಂದ್ ಆಗಲಿದೆ ಎಂದು ಸಂಘಟನೆಗಳು ತಿಳಿಸಿವೆ.
ಡಿಸೆಂಬರ್ 31ರಂದು ಹೊಸ ವರ್ಷ ಮುನ್ನಾ ದಿನವಾಗಿರುವುದರಿಂದ ಅಂದು ಬಂದ್ ಮಾಡಿದರೆ ಬಹಳಷ್ಟು ಜನರಿಗೆ ತೊಂದರೆಯಾಗುತ್ತದೆ, ನೀವು ಬೇಕಿದ್ದರೆ 30ರಂದೋ, ಇನ್ನೊಂದು ದಿನವೋ ಮಾಡಿಕೊಳ್ಳಿ ಎಂದು ವಂದೇ ಮಾತರಂ ಸಂಘಟನೆಯ ಶಿವ ಕುಮಾರ್ ಅಪಸ್ವರ ತೆಗೆದರು.
ಅದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೆರಳಿ ಅವರಿಗೆ ಮುತ್ತಿಗೆ ಹಾಕಿ ಥಳಿಸುವ ಪ್ರಯತ್ನ ಮಾಡಿದರು. ನಂತರ ಪೊಲೀಸರು ಬಂದು ವಾತಾವರಣವನ್ನ ತಿಳಿಸಿಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾ ರಾ ಗೋವಿಂದ್, ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.








