ಬಿಎಸ್ಸಿ ವಿದ್ಯಾರ್ಥಿನಿಗೆ ಒಂದು ದಿನದ ಮಟ್ಟಿಗೆ ಸಿಎಂ ಪಟ್ಟ
ದೆಹರಾದೂನ್ : ಉತ್ತರಾಖಂಡದಲ್ಲಿ ಬಿಎಸ್ಸಿ ವಿದ್ಯಾರ್ಥಿನಿ ಒಂದು ದಿನದ ಮಟ್ಟಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಲಿದ್ದಾರೆ.
ರಾಷ್ಟ್ರೀಯ ಬಾಲಕಿಯರ ದಿನಾಚರಣೆ ಅಂಗವಾಗಿ ಹರಿದ್ವಾರದ ಸೃಷ್ಟಿ ಗೋಸ್ವಾಮಿ ಜನವರಿ 24ರಂದು ಮುಖ್ಯಮಂತ್ರಿಯಾಗಲಿದ್ದಾರೆ.
ಸೃಷ್ಟಿ ಹರಿದ್ವಾರದ ಸಣ್ಣ ಹಳ್ಳಿಯೊಂದರ ಹೆಣ್ಣು ಮಗಳಾಗಿದ್ದು, ತಂದೆ ಪ್ರವೀಣ್ ಒಬ್ಬ ಉದ್ಯಮಿ, ಮತ್ತು ತಾಯಿ ಸುಧಾ ಗೃಹಿಣಿ.
ಸೃಷ್ಟಿ ರೂರ್ಕಿಯಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ.
ಮೇ 2018 ರಲ್ಲಿ ಸೃಷ್ಟಿ ಉತ್ತರಾಖಂಡ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇನ್ನು ಸೃಷ್ಟಿ ಸಿಎಂ ಕಚೇರಿಯನ್ನು ವಹಿಸಿಕೊಳ್ಳುವ ಮೊದಲು, ಉತ್ತರಾಖಂಡ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಯೋಜನೆಗಳ ಬಗ್ಗೆ ತಲಾ ಐದು ನಿಮಿಷಗಳ ಪ್ರಸ್ತುತಿಯನ್ನು ನೀಡಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









