ಬೆಳಗಾವಿಯಲ್ಲಿ ಭಾರಿ ಮಳೆ : ಮತ್ತೊಂದು ಮನೆ ಕುಸಿತ Khanapur saaksha tv
ಬೆಳಗಾವಿ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾ ಜಿಲ್ಲೆಯಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು, ಖಾನಾಪುರ ತಾಲೂಕಿನ ಹುಲಿಕೊತ್ತಲ ಗ್ರಾಮದಲ್ಲಿ ಮತ್ತೊಂದು ಮನೆ ಗೋಡೆ ಕುಸಿತವಾಗಿದೆ.
ಕಲ್ಲಪ್ಪ ಮುದಕಪ್ಪ ಬಿಳಕಿ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.
ಇದರೊಂದಿಗೆ ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಒಟ್ಟು ಮೂರು ಮನೆಗಳು ಕುಸಿತಗೊಂಡಂತಾಗಿದೆ.
ಅಕ್ಟೋಬರ್ 6ರಂದು ಬಡಾಲ ಅಂಕಲಗಿಯಲ್ಲಿ ಮನೆಗೋಡೆ ಕುಸಿದು 7 ಜನ ಮೃತಪಟ್ಟಿದ್ದರು.
10ರಂದು ದೇಸೂರು ಬಳಿ ತಗಡಿನ ಶೆಡ್ ಕುಸಿದು ಇಬ್ಬರು ಪ್ರಾಣಕಳೆದುಕೊಂಡಿದ್ದರು.