ಹೊಸದಿಲ್ಲಿ, ಮೇ14: ಇಂದು ಹಣಕಾಸು ಸಚಿವೆ ಸೀತಾರಾಮನ್ ಎರಡನೇ ಸುದ್ದಿಗೋಷ್ಠಿಯನ್ನು ನಡೆಸಿದ್ದು, ರೈತರು ಹಾಗೂ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಪರಿಹಾರ ಪ್ಯಾಕೇಜ್ ಪ್ರಕಟಿಸಿದ್ದಾರೆ.
ರೈತರ ಸುರಕ್ಷತೆಗಾಗಿ ನಿರ್ಮಲಾ ಸೀತಾರಾಮನ್ 25 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಘೊಷಣೆ ಮಾಡಿದರು. ಕೃಷಿ ಚಟುವಟಿಕೆಗಳ ಅಭಿವೃದ್ಧಿಗಾಗಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 4 ಲಕ್ಷ ಕೋಟಿ ರೂಪಾಯಿಗಳ ಸಾಲ ಮತ್ತು ಸಾಲದ ಇಎಂಐ ಕಟ್ಟಲು ಮೂರು ತಿಂಗಳ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದ ಸಚಿವೆ ನಬಾರ್ಡ್ ಮೂಲಕ 29,500 ಕೋಟಿ ರೂಪಾಯಿ ಸಾಲವನ್ನು ವಿತರಿಸಲಾಗುತ್ತದೆ ಎಂದರು.
ರಾಜ್ಯಗಳಿಗೆ ರೈತರ ಬೆಳೆಯನ್ನು ಖರೀದಿ ಮಾಡಲು 6700 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದ್ದು, ಮಾರ್ಚ್ 1 ರಿಂದ 31ರ ವರೆಗೆ
ಲಾಕ್ ಡೌನ್ ನಡುವೆಯೂ ರೈತರಿಗೆ ಸಾಲವನ್ನು ನೀಡಲಾಗಿದೆ ಎಂದರು. ಎಸ್.ಡಿ.ಆರ್.ಎಫ್ ನಿಧಿಗೆ, ವಲಸೆ ಕಾರ್ಮಿಕರ ಊಟ, ವಸತಿಗಾಗಿ 11 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಜಮಾವಣೆ ಮಾಡಲಾಗಿದ್ದು, ರಾಜ್ಯ ಸರ್ಕಾರಗಳಿಗೆ ಎಸ್.ಡಿ.ಆರ್.ಎಫ್ ನಿಧಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದರು. ನಗರ ಪ್ರದೇಶಗಳಲ್ಲಿ ವಾಸವಿರುವ ಬಡವರಿಗೆ ಸ್ವಯಂ ಸೇವಾ ಸಂಘಗಳು ಸಹಾಯ ಮಾಡುತ್ತಿದ್ದು, ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ₹182ರಿಂದ ₹202 ಕ್ಕೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ ಈಗಾಗಲೇ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಊರಿಗೆ ಹಿಂತಿರುಗಿ ಹೋಗಿರುವ ವಲಸೆ ಕಾರ್ಮಿಕರಿಗೆ ನರೇಗಾ ಮೂಲಕ ಕೆಲಸವನ್ನು ನೀಡಲು ಸೂಚನೆಗಳನ್ನು ನೀಡಲಾಗಿದೆ ಎಂದರು. ಕನಿಷ್ಠ 10 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮತ್ತು ಸ್ವಯಂ ಪ್ರೇರಿತರಾಗಿ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಇಎಸ್ಐ ಸೌಲಭ್ಯ ನೀಡಲು ನಿರ್ಧಾರಿಸಿದ್ದು, ನೌಕರರ ಗ್ರಾಜ್ಯುಟಿ ಅವಧಿಯನ್ನು 5 ರಿಂದ 1 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಜೊತೆಗೆ ಅರೆಕಾಲಿಕ ನೌಕರರಿಗೆ ವಿಶೇಷ ಸಾಮಾಜಿಕ ಭದ್ರತಾ ಯೋಜನೆಯನ್ನು ರೂಪಿಸಲಾಗಿದೆ.
ದೇಶದ ಎಲ್ಲಾ ರಾಜ್ಯಗಳಲ್ಲೂ ಬಳಸುವಂತೆ ಒಂದು ದೇಶ, ಒಂದು ಪಡಿತರ ಯೋಜನೆ ಜಾರಿಯಗಲಿದ್ದೂ, 23 ರಾಜ್ಯಗಳ 67 ಕೋಟಿ ಜನರಿಗೆ ಅನುಕೂಲವಾಗುವಂತೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದರು. ವರ್ಷಕ್ಕೆ 6 ರಿಂದ 18 ಲಕ್ಷ ವಾರ್ಷಿಕ ಸಂಬಳ ಪಡೆಯುವ ಉದ್ಯೋಗಿಗಳಿಗೂ ವಿಶೇಷ ಯೋಜನೆ ರೂಪಿಸಲಾಗಿದ್ದು, ಡಿಜಿಟಲ್ ಪೇಮೆಂಟ್ ಮಾಡುವವರಿಗೆ ವಿಶೇಷ ಇನ್ಸೆಂಟಿವ್ಸ್ ನೀಡಲು ನಿರ್ಧಾರ ಮಾಡಲಾಗಿದೆ ಎಂದ ಸಚಿವೆ ಇದಕ್ಕಾಗಿ 70 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದರು.
ಮುದ್ರಾ ಶಿಶು ಲೋನ್ ಎಂದರೆ ಗರಿಷ್ಠ 50 ಸಾವಿರ ಸಾಲ ಪಡೆದವರು ಮೂರು ತಿಂಗಳ ಬಳಿಕ ಇಎಂಐ ಕಟ್ಟಿದರೆ ಅವರಿಗೆ ತಮ್ಮ ಇಎಂಐ ಮೇಲೆ ಶೇ.2ರಷ್ಟು ಇನ್ಸೆಂಟಿವ್ಸ್ ನೀಡಲು ನಿರ್ಧಾರ ಮಾಡಲಾಗಿದ್ದು, ಇದರಿಂದ 3 ಕೋಟಿ ಅತಿ ಚಿಕ್ಕ ಸಾಲಗಾರರಿಗೆ ಸಹಾಯವಾಗಲಿದೆ ಎಂದರು. 5 ಸಾವಿರ ಕೋಟಿ ವಿಶೇಷ ಕ್ರೆಡಿಟ್ ಸೌಲಭ್ಯವನ್ನು ಬೀದಿ ಬದಿ ವ್ಯಾಪಾರಿಗಳಿಗಾಗಿ ಕಲ್ಪಿಸಿದ್ದು, ಪ್ರಾಥಮಿಕ ಹಂತದಲ್ಲಿ 10 ಸಾವಿರ ರೂಪಾಯಿ ಸಾಲ ನೀಡಲಾಗುವುದು. ಮನೆಕೆಲಸದವರು, ಚಿಕ್ಕ ಅಂಗಡಿ ಮುಂಗಟ್ಟು ಹೊಂದಿದವರಿಗೂ ಈ ಸೌಲಭ್ಯ ಕಲ್ಪಿಸಿದ್ದು, ಒಂದು ತಿಂಗಳ ಒಳಗಾಗಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದರು.
ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.
56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...








