ಮಂಡ್ಯ ಜಿಲ್ಲೆಯಾದ್ಯಂತ ಒಂದು ವಾರ ಶಾಲೆಗಳು ಬಂದ್..!

1 min read
weekend curfew Tough Rules in mandya saaksha tv

ಮಂಡ್ಯ ಜಿಲ್ಲೆಯಾದ್ಯಂತ ಒಂದು ವಾರ ಶಾಲೆಗಳು ಬಂದ್..! One week schools bandh from Mandya district

ಮಂಡ್ಯ : ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಕೊರೊನಾ ಸೋಂಕು ಸ್ಫೋಟವಾಗುತ್ತಿರುವುದರಿಂದ ಒಂದು ವಾರದ ಕಾಲ ಶಾಲೆಗಳು ಬಂದ್ ಮಾಡಲಾಗಿದೆ.

ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಆದೇಶ ಹೊರಡಿಸಿದ್ದಾರೆ.

ಜನವರಿ 17 ರಿಂದ ಜನವರಿ 22 ರವರೆಗೆ ಜಿಲ್ಲೆಯಾದ್ಯಂತ 1 ರಿಂದ 7 ತರಗತಿ ವರೆಗೆ ಭೌತಿಕ ತರಗತಿಗಳು ಇರುವುದಿಲ್ಲ.

One week schools bandh from Mandya district saaksha tv

ಸರ್ಕಾರಿ, ಖಾಸಗಿ, ಅನುದಾನಿತ, ವಸತಿ ಶಾಲೆಗಳು ಒಳಗೊಂಡಂತೆ 1 ರಿಂದ 7 ತರಗತಿ ವರೆಗಿನ ಶಾಲೆಗಳನ್ನು ಜಿಲ್ಲೆಯಾದ್ಯಂತ 6 ದಿನಗಳ ಕಾಲ ಬಂದ್ ಮಾಡಲಾಗಿದೆ.

6 ದಿನಗಳು ಅಂಗನವಾಡಿ ಕೇಂದ್ರವನ್ನೂ ಸಹ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಭೌತಿಕ ತರಗತಿಗಳನ್ನು ಬಂದ್ ಮಾಡಿರುವುದರಿಂದ ರಜಾ ದಿನಗಳಲ್ಲಿ ಆನ್ ಲೈನ್ ತರಗತಿ ಮಾಡಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd