ಬೆಂಗಳೂರು : ಪೂರೈಕೆ ಕೊರತೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ರಾಜ್ಯದಲ್ಲಿ ಈರುಳ್ಳಿ ಬೆಲೆ ( onion price ) ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಕಳೆದ ಒಂದು ವಾರದಿಂದ ಸತತವಾಗಿ ಈರುಳ್ಳಿ ಬೆಲೆ ಏರುತ್ತಿದ್ದು, ಗುರುವಾರ ಈರುಳ್ಳಿ ಕೆಜಿಗೆ 120 ರೂ.ದಾಖಲಿಸಿದೆ. ಇದು ಹೀಗೆ ಮುಂದುವರಿದರೇ ಈರುಳ್ಳಿ ಬೆಲೆ ಕೆಜಿಗೆ 200 ರೂಪಾಯಿಯ ಗಡಿ ದಾಟುವ ಎಲ್ಲಾ ಸಾಧ್ಯತೆಗಳಿವೆ .
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇದರಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ಕರ್ನಾಟಕಕ್ಕೆ ಮಹಾರಾಷ್ಟ್ರದಿಂದ ಈರುಳ್ಳಿ ಬರುತ್ತಿತ್ತು, ಆದ್ರೆ ಈಗ ಅಲ್ಲಿ ಕೂಡ ಮಳೆರಾಯನ ಆರ್ಭಟ ಜೋರಾಗಿದ್ದು, ರೈತರು ಈರುಳ್ಳಿ ಫಸಲನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : ಇಳಿದ ಭೀಮಾನದಿ ಪ್ರವಾಹ; ಸಹಜ ಸ್ಥಿತಿಯತ್ತ ಮರಳುತ್ತಿರುವ ಜನಜೀವನ..!
ರಾಜ್ಯದಲ್ಲಿ ಬೇಡಿಕೆಯಷ್ಟು ಈರುಳ್ಳಿ ಇಲ್ಲದಿರುವ ಕಾರಣ, ಸಗಟು ವ್ಯಾಪಾರಿಗಳು ಮಧ್ಯಪ್ರದೇಶ ಸೇರಿದಂತೆ ಬೇರೆ ರಾಜ್ಯದಿಂದ ಈರುಳ್ಳಿಯನ್ನು ತರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಈರುಳ್ಳಿ ಕೆಜಿಗೆ 50 ರೂ ಇದ್ದರೇ, ಸಾಗಾಣಿಕೆ ಹಾಗೂ ಇತರೆ ವೆಚ್ಚ ಸೇರಿ ಇಲ್ಲಿ 120 ರೂಪಾಯಿಗೆ ಈರುಳ್ಳಿ ಮಾರಾಟ ಆಗುತ್ತಿದೆ.
ಈರುಳ್ಳಿ ಬೆಲೆ ದುಪ್ಪಟ್ಟಾಗಿದ್ದರೂ ರೈತರಿಗೆ ಯಾವ ಲಾಭವೂ ಸಿಗುತ್ತಿಲ್ಲ. ಯಾಕೆಂದ್ರೆ ಇಲ್ಲಿ ಮಧ್ಯವರ್ತಿ ಹಾವಳಿ ಜೋರಾಗಿದೆ. ಶೇ 80 ರಷ್ಟು ಲಾಭ ದಲ್ಲಾಳಿಗಳಿಗೇ ಹೊಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ.
ಸದ್ಯ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳ ಗೋದಾಮಿನಲ್ಲಿ ದಾಸ್ತಾನಾಗಿರುವ ಈರುಳ್ಳಿ ಮಾತ್ರ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ಬೇಡಿಕೆ ಹೀಗೆ ಮುಂದುವರಿದರೇ ಈಜಿಪ್ಟ್ ನಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಆಗ ಕೆಜಿಗೆ 200 ರೂಪಾಯಿ ಆಗುವ ಸಾಧ್ಯತೆಗಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel