ಕೋಲಾರ : ರಾಜ್ಯದಲ್ಲಿ ಅಬಕಾರಿ ಸುಂಕ ಹೆಚ್ಚಳವಾಗಿದ್ದು, ಈ ಬಗ್ಗೆ ಕೋಲಾರದಲ್ಲಿ ಅಬಕಾರಿ ಸಚಿವ ಹೆಚ್. ನಾಗೇಶ್ ಅವರು ಪ್ರತಿಕ್ರಿಯೆ ನೀಡಿದ್ದು, “ಯಾರ ಬಳಿ ದುಡ್ಡಿದೆಯೋ ಅವರು ಮಾತ್ರ ಕುಡಿಯಿರಿ” ಎಂದಿದ್ದಾರೆ. ಅಲ್ಲದೆ “ದೆಹಲಿ ಹಾಗೂ ಆಂಧ್ರ ಮಾದರಿಯಲ್ಲಿ ನಮ್ಮಲ್ಲೂ ಟ್ಯಾಕ್ಸ್ ಹೆಚ್ಚಳ ಆಗಿದೆ” ಎಂದು ಹೇಳಿದ್ದಾರೆ.
“ರಾಜ್ಯಾದ್ಯಂತ ಶೇ.40 ರಷ್ಟು ಮದ್ಯದಂಗಡಿಗಳು ತೆರೆದಿವೆ. ಎಂಎಸ್ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಇದುವರೆಗೂ 500 ಕೋಟಿವರೆಗೂ ಕಲೆಕ್ಷನ್ ಆಗಿದೆ. ಇಂದಿನಿಂದ 11 ಪರ್ಸೆಂಟ್ ಟ್ಯಾಕ್ಸ್ ಹೆಚ್ಚಿಸಲಾಗಿದೆ” ಎಂದು ತಿಳಿಸಿದರು.
ಇನ್ನು “ಒಟ್ಟು 18 ಸ್ಲ್ಯಾಬ್ ನಲ್ಲಿ 4 ಸ್ಲ್ಯಾಬ್ ನಲ್ಲಿ ಹೆಚ್ಚಿನ ಆದಾಯ ಬರಲಿದೆ. ಒಂದು ಕ್ವಾರ್ಟರ್ ಮೇಲೆ 5 ರೂಪಾಯಿ ಹೆಚ್ಚಳವಾಗಲಿದೆ. ಒಟ್ಟು 22,500 ಸಾವಿರ ಕೋಟಿ ಟಾರ್ಗೆಟ್ ಇತ್ತು. ತೆರಿಗೆ ಹೆಚ್ಚಳ ಆಗಿರೋದ್ರಿಂದ 2,500 ಕೋಟಿ ಹೆಚ್ಚಿಗೆ ಬರಲಿದೆ. ಈ ವರ್ಷ ಒಟ್ಟು 25 ಸಾವಿರ ಕೋಟಿ ನಮ್ಮ ಬೊಕ್ಕಸಕ್ಕೆ ಬರಲಿದೆ”. ಎಂಎಸ್ಐಎಲ್ ಹಾಗೂ ವೈನ್ ಶಾಪ್ ಬಿಟ್ಟು, ಇನ್ನುಳಿದ ಶಾಪ್ ಗಳನ್ನು ತೆರೆಯಲು 18ನೇ ತಾರೀಖಿನ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.