ಬೆಂಗಳೂರಿನ ಜೆಪಿ ನಗರದಲ್ಲಿನ ನಿವಾಸದಲ್ಲಿ ಅಭಿಷೇಕ್ ಅಂಬರೀಶ್ ಅವರು ಮಂಡ್ಯ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಮ್ಮ ತಂದೆ-ತಾಯಿ ಆಸೆಯಂತೆ ಮಂಡ್ಯದಲ್ಲಿ ಬೀಗರ ಊಟ ಏರ್ಪಿಡಿಸಲಾಗಿತ್ತು. ತುಂಬಾ ಜನರು ಕಷ್ಟ ಪಟ್ಟು ವ್ಯವಸ್ಥೆ ಮಾಡಿದ್ದರು. ಊಟದಲ್ಲಿ ಯಾವುದೇ ಕೊರತೆಯಾಗಿಲ್ಲ. ಯಾರನ್ನೂ ದುಡ್ಡು ಕೊಟ್ಟು ಕರೆಯಿಸಿಲ್ಲ. ಎಲ್ಲರೂ ಪ್ರೀತಿ- ಅಭಿಮಾನದಿಂದ ಬಂದಿದ್ದಾರೆ. ಕೆಲವರು ಅಡುಗೆ ಮನೆಗೆ ನುಗ್ಗಿದ್ದಾಗ ಸಣ್ಣ ಪುಟ್ಟ ತೊಂದರೆಯಾಗಿದೆ. ಯಾರನ್ನೂ ಊಟ ಇಲ್ಲದೆ ಕಳುಹಿಸಬೇಕೆಂದು ಕರೆಯಿಸಿಲ್ಲ. ಏನಾದರೂ ತೊಂದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಮನವಿ ಮಾಡಿದ್ದಾರೆ.
ಜನರು ನಿರೀಕ್ಷೆಗಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಊಟಕ್ಕಿಂತ ಹೆಚ್ಚಾಗಿ ನಿಮ್ಮನ್ನು ನೋಡಲು ನಾವು ಬಂದಿದ್ದೇವು ಎಂದು ಹೇಳಿದವರೇ ಹೆಚ್ಚಿದ್ದಾರೆ. ಹಲವರಿಗೆ ಊಟ ಮಿಸ್ ಆಗಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ. ಆದರೆ, ರಾಜಕೀಯ ವಿರೋಧಿಗಳು ಇದನ್ನೇ ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಲು ಮುಂದಾಗಿದ್ದಾರೆ. ಅವರಿಗೂ ಒಳ್ಳೆಯದು ಆಗಲಿ. ನಮ್ಮ ತಂದೆಯ ಆಸೆಯಂತೆ ಮದುವೆಯಾಗಿದ್ದೇನೆ. ಇಲ್ಲದಿದ್ದರೆ ಸಿಂಪಲ್ ಆಗಿ ಮದುವೆಯಾಗುತ್ತಿದ್ದೆ. ಅವಿವಾ ಮಂಡ್ಯ ಜನತೆಯ ಪ್ರೀತಿ ಕಂಡು ಸ್ಪೀಚ್ ಲೆಸ್ ಆಗಿದ್ದರು. ಜನರು ಇಷ್ಟೊಂದು ಪ್ರೀತಿ ತೋರಿಸುತ್ತಾರಾ ಎಂದು ಎಮೋಶನಲ್ ಆಗಿದ್ದರು ಎಂದು ಹೇಳಿದ್ದಾರೆ.








