ನಾಳೆಯಿಂದ ಜಾತ್ರೆ ಬಿಟ್ಟು ಎಲ್ಲ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ
ಬೆಂಗಳೂರು : ನಾಳೆಗೆ ಮೂರನೇ ಹಂತದ ಅಲ್ ಲಾಕ್ ಅವಧಿ ಮುಗಿಯಲಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಇನ್ನಷ್ಟು ಲಾಕ್ ಡೌನ್ ಸಡಿಲಿಕೆಗೆ ನಿರ್ಧರಿಸಿದ್ದಾರೆ.
ಮುಖ್ಯವಾಗಿ ನಾಳೆಯಿಂದ ಎಲ್ಲಾ ದೇವಾಲಯಗಳಲ್ಲಿ ಭಕ್ತರು ಸೇವೆ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಈ ಹಿಂದೆ ಅನ್ ಲಾಕ್ 3.0 ನಲ್ಲಿ ದೇವಾಲಯಗಳನ್ನು ಓಪನ್ ಮಾಡಿದ್ರೂ, ಜನರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.
ಇದನ್ನು ಹೊರೆತುಪಡಿಸಿದರೆ ಪ್ರಸಾದ, ತೀರ್ಥ, ವಿಶೇಷ ಪೂಜೆ, ಸೇವೆಗಳಿಗೆ ನಿಷೇಧ ಏರಲಾಗಿತ್ತು.
ಆದ್ರೆ ನಾಳೆ ಬೆಳಿಗ್ಗೆ 5 ಗಂಟೆಗೆ ಅನ್ ಲಾಕ್ 3.0 ಅಂತ್ಯವಾಗಲಿದ್ದು, ನಾಳೆಯಿಂದಲೇ ದೇವಾಲಯದಲ್ಲಿ ಜಾತ್ರೆಯನ್ನು ಹೊರೆತುಪಡಿಸಿ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ಕೊಟ್ಟಿದೆ.