ಜೈಪುರ: ಬಿಜೆಪಿಯಿಂದ ಆಯ್ಕೆಯಾಗಿರುವ ಶಾಸಕ ಬಲ್ಮುಕುಂದ್ ಆಚಾರ್ಯ (Balmukundachary) ಆದೇಶ ಹೊರಡಿಸಿದ್ದು, ನಾನ್ ವೆಜ್ ಮಾರುವ ವಾಹನ, ಅಂಗಡಿಗಳನ್ನು ತೆಗೆದು ಹಾಕುವಂತೆ ಆದೇಶ ನೀಡಿದ್ದಾರೆ.
ರಾಜಧಾನಿ ಜೈಪುರದ ಹವಾಮಹಲ್‍ನಿಂದ ಚುನಾವಣೆಯಲ್ಲಿ (Hawa Mahal Assembly Election) ಗೆಲುವು ಕಾಣುತ್ತಿದ್ದಂತೆಯೇ ಬೆಂಬಲಿಗರು ಹೂಮಾಲೆ ಹಾಕಿ ಸ್ವಾಗತಿಸಿದರು. ಸಂಜೆಯ ವೇಳೆಗೆ ಒಂದೇ ಒಂದು ನಾನ್ ವೆಜ್ ಸ್ಟಾಲ್ ಕೂಡ ಇರಬಾರದು ಎಂದರು.
ನೂತನ ಶಾಸಕರ ಆದೇಶದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಬಲ್ಮುಕುಂದ್ ಆಚಾರ್ಯ ಅವರು ಮೊಬೈಲ್‍ನಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ. ಅಲ್ಲದೇ, ನಾನ್ ವೆಜ್ ಮಾರಾಟ ಮಾಡುವ ಗಾಡಿಗಳನ್ನು ತೆಗೆಯುವಂತೆಯೂ ಆದೇಶಿಸಿದ್ದಾರೆ. ಸಂಜೆಯವರೆಗೂ ನಾನ್ ವೆಜ್ ಗಾಡಿಗಳು (Non Veg Vehicle) ರಸ್ತೆಯಲ್ಲಿ ಕಾಣಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ.